ಕರ್ನಾಟಕ

karnataka

ETV Bharat / state

ಮಾಂಸಕ್ಕಾಗಿ ಪ್ರತಿರಾತ್ರಿ ಹೊಂಚು... ಪ್ರಾಣಿಗಳಿಗೆ ಉರುಳು ಹಾಕುತ್ತಿದ್ದವ ಅಂದರ್

ಮಲೆಮಹದೇಶ್ವರ ವನ್ಯಜೀವಿಧಾಮದ ಪಾಲಾರ್ ಅರಣ್ಯ ವಲಯದಲ್ಲಿ ರಾತ್ರಿ ವೇಳೆ ಮೊಲ, ಕಾಡುಹಂದಿ, ಜಿಂಕೆಗೆ ಉರುಳು ಹಾಕಿ ಬೇಟೆಯಾಡುತ್ತಿದ್ದ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಮಾಂಸಕ್ಕಾಗಿ ಪ್ರತಿರಾತ್ರಿ ಹೊಂಚು..ಪ್ರಾಣಿಗಳಿಗೆ ಉರುಳು ಹಾಕುತ್ತಿದ್ದವ ಅಂದರ್

By

Published : Aug 19, 2019, 2:23 AM IST

ಚಾಮರಾಜನಗರ:ಮಲೆಮಹದೇಶ್ವರ ವನ್ಯಜೀವಿಧಾಮದ ಪಾಲಾರ್ ಅರಣ್ಯ ವಲಯದಲ್ಲಿ ರಾತ್ರಿ ವೇಳೆ ಮೊಲ, ಕಾಡುಹಂದಿ, ಜಿಂಕೆಗೆ ಉರುಳು ಹಾಕಿ ಬೇಟೆಯಾಡುತ್ತಿದ್ದ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಹನೂರು ತಾಲೂಕಿನ ಹಳೇ ಮಾರ್ಟಹಳ್ಳಿ ಗ್ರಾಮದ ರಾಜಾ ಕಣ್ಣನ್ ಬಂಧಿತ ಆರೋಪಿ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವ ವೇಳೆ ಮೂವರು ಉರುಳು ಬಿಚ್ಚುತ್ತಿದಿದ್ದನ್ನು ಕಂಡು ದಾಳಿ ನಡೆಸಿದಾಗ‌ ರಾಜಾ ಕಣ್ಣನ್​ ಸಿಕ್ಕಿಬಿದ್ದಿದ್ದು, ಇನ್ನಿಬ್ಬರು ಆರೋಪಿಗಳಾದ ದೊಡ್ಡಾಣೆ ಗ್ರಾಮದ ನಾಗೇಶ ಮತ್ತು ಪುಟ್ಟು ಎಂಬವರು ಪರಾರಿಯಾಗಿದ್ದಾರೆ. ರಾತ್ರಿ ವೇಳೆ ಉರುಳು ಹಾಕಿ ಬೆಳಗ್ಗೆ ಹೊತ್ತಿಗೆ ಬಿಚ್ಚುತ್ತಿದ್ದೆವು ಎಂದು ಬಂಧಿತ ಆರೋಪಿ ರಾಜಾಕಣ್ಣನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಈಗಾಗಲೇ ಹಳೇ ಮಾರ್ಟಹಳ್ಳಿ ಗ್ರಾಮದ ಹಲವರು ಮಾಂಸಕ್ಕಾಗಿ ಬೇಟೆಯಾಡುವಾಗ ಸಿಕ್ಕಿ ಹಾಕಿಕೊಂಡಿದ್ದು, ಈ ಭಾಗದಲ್ಲಿ ಮತ್ತಷ್ಟು ಗಸ್ತನ್ನು ಹೆಚ್ಚಿಸುತ್ತೇನೆ ಎಂದು ಡಿಎಫ್ಒ ಏಡುಕುಂಡಲ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ‌.

ABOUT THE AUTHOR

...view details