ಕರ್ನಾಟಕ

karnataka

ETV Bharat / state

ಡಿವೈಡರ್​ಗೆ ಓಮ್ನಿ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ - ಕೊಳ್ಳೇಗಾಲ ಓಮ್ನಿ ಕಾರು ಡಿಕ್ಕಿ

ಡಿವೈಡರ್​ಗೆ ಓಮ್ನಿ ಡಿಕ್ಕಿ ಹೊಡೆದಿದ್ದು, ಚಾಲಕನ ಎರಡೂ ಕಾಲು ಮುರಿದು ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ಬಾಪುನಗರ ಬಳಿ ನಡೆದಿದೆ.

kollegala
ಚಾಲಕನಿಗೆ ಗಂಭೀರ ಗಾಯ

By

Published : Mar 22, 2021, 6:25 AM IST

ಕೊಳ್ಳೇಗಾಲ:ಡಿವೈಡರ್​ಗೆ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಎರಡೂ ಕಾಲು ಮುರಿದು ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ಬಾಪುನಗರ ಬಳಿ ನಡೆದಿದೆ.

ಮದ್ದೂರು ಗ್ರಾಮದ ಕಿರಣ್ ಕುಮಾರ್ (35) ಅಪಘಾತದಲ್ಲಿ ಗಾಯಾಳು ವ್ಯಕ್ತಿ. ಈತ ತನ್ನೂರಾದ ಮದ್ದೂರು ಗ್ರಾಮದಿಂದ ಓಮ್ನಿ‌ ಕಾರಿನಲ್ಲಿ ಕೊಳ್ಳೇಗಾಲ ಪಟ್ಟಣಕ್ಕೆ ಬರುವಾಗ ಬಾಪುನಗರ ಹೆದ್ದಾರಿಯಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಆತನ ಎರಡೂ ಕಾಲು ಮುರಿದಿವೆ.

ಇದನ್ನು ಓದಿ: ನಿಂತಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್​ ಡಿಕ್ಕಿ: ಮೂವರ ಸಾವು

ಕಾರಿನೊಳಗೆ ಸಿಲುಕಿಕೊಂಡಿದ್ದ ಕಿರಣ್ ಕುಮಾರ್​ನನ್ನು ಹೊರ ತೆಗೆದು ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಕೆಎಸ್ಆರ್​ಟಿ ಬಸ್ ಚಾಲಕ ಎಂದು ತಿಳಿದು ಬಂದಿದೆ. ಪಟ್ಟಣದ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details