ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ: ಕಾವೇರಿ ನದಿಗೆ ಬಟ್ಟೆ ತೊಳೆಯಲು ಹೋದ ವೃದ್ಧೆ ಸಾವು - Latest Kaveri River News

ವೃದ್ಧೆಯೊಬ್ಬಳು ಬಟ್ಟೆ ತೊಳೆಯಲು ನದಿಗೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

Old woman drowns in Kaveri river
ಸಂಗ್ರಹ ಚಿತ್ರ

By

Published : Nov 3, 2020, 8:23 PM IST

ಕೊಳ್ಳೇಗಾಲ:ಬಟ್ಟೆ ತೊಳೆಯಲೆಂದು ಕಾವೇರಿ ನದಿಗೆ ಹೋಗಿದ್ದ ವೃದ್ಧೆಯೊಬ್ಬಳು ಕಾಲುಜಾರಿ ನೀರುಪಾಲಾಗಿರುವ ಘಟನೆ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಜರುಗಿದೆ. ಗ್ರಾಮದ ವೆಂಕಟಮ್ಮ (85) ಮೃತ್ತ ದುರ್ದೈವಿ ಎಂದು ತಿಳಿದು ಬಂದಿದೆ.

ವೆಂಕಟಮ್ಮ ನಿನ್ನೆಯ ದಿನ ಗ್ರಾಮದ ಹೊರವಲಯದಲ್ಲಿರುವ ಕಾವೇರಿ ನದಿ ತೀರದಲ್ಲಿ ಬಟ್ಟೆ ತೊಳೆಯಲೆಂದು ತೆರಳಿದ್ದಳು. ಈ ವೇಳೆ ಆಕಸ್ಮಿಕ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗುತ್ತಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details