ಚಾಮರಾಜನಗರ: 60 ರ ಬಳಿಕ ಅರಳು ಮರಳಲ್ಲ ಮರಳಿ ಅರಳು ಎಂಬ ಮಾತಿನಂತೆ ಈ ವೃದ್ಧೆಗೆ ನೆರೆ ಕೂದಲಿನ ಜಾಗದಲ್ಲಿ ಕಪ್ಪು ಕೂದಲು, 4 ಹೊಸ ಹಲ್ಲುಗಳು ಹುಟ್ಟಿ ಗ್ರಾಮದಲ್ಲಿ ಎಲ್ಲರ ಗಮನ ಸೆಳೆದಿದ್ದ ಶತಾಯುಷಿ ಇಂದು ನಿಧನರಾಗಿದ್ದಾರೆ.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಲೇ. ರಂಗನಾಯಕರ ಪತ್ನಿ ನಿಂಗಮ್ಮ (104) ಮೃತರು. ಕಳೆದ ಒಂದು ವರ್ಷದ ಹಿಂದೆ ನಿಂಗಮ್ಮಗೆ ನೆರೆ ಕೂದಲಿದ್ದ ಜಾಗದಲ್ಲಿ ಕಪ್ಪು ತಲೆಗೂದಲು ಹುಟ್ಟಿದ್ದವು. ಇದರೊಟ್ಟಿಗೆ, ದವಡೆ ಹಲ್ಲುಗಳು ಮೂಡಿ ಎಲ್ಲರನ್ನೂ ಅಚ್ಚರಿಗೆ ನೂಕಿತ್ತು.