ಕೊಳ್ಳೇಗಾಲ/ಚಾಮರಾಜನಗರ: ಪದೇ ಪದೇ ಮನೆ ಬಿಟ್ಟು ಹೋಗುವುದನ್ನೇ ಚಾಳಿ ಮಾಡಿಕೊಂಡಿದ್ದ ವೃದ್ಧ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದ ವೃದ್ಧ ಶವವಾಗಿ ಪತ್ತೆ - ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದ ವೃದ್ಧ ಶವವಾಗಿ ಪತ್ತೆ
ಅನಾರೋಗ್ಯದಿಂದ ಬೇಸತ್ತು ಮನೆ ಬಿಟ್ಟು ಹೋಗುತ್ತಿದ್ದ ವೃದ್ಧನ ಶವ ಶಿವನಸಮುದ್ರದ ಬಳಿಯ ಕಾವೇರಿ ನದಿ ತೀರದಲ್ಲಿ ಪತ್ತೆಯಾಗಿದೆ.
ಕೊಳ್ಳೇಗಾಲದ ಸಿದ್ದಯ್ಯನಪುರ ಗ್ರಾಮದ ಮಾದೇಗೌಡ (74) ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಈತ ಆಗಾಗ ಮನೆ ಬಿಟ್ಟು ಹೋಗುತ್ತಿದ್ದ. ಮೇ 12 ರಂದು ಸಹ ಮನೆ ಬಿಟ್ಟು ಹೋಗಿದ್ದ. ಶಿವನಸಮುದ್ರದ ಬಳಿಯ ಕಾವೇರಿ ನದಿ ತೀರದಲ್ಲಿ ವೃದ್ಧನ ಶವ ಪತ್ತೆಯಾಗಿದೆ. ಇತ ಹಲವು ವರ್ಷಗಳಿಂದ ಪಿಡ್ಸ್, ಬಿಪಿ, ಶುಗರ್ ಕಾಯಿಲೆಯಿಂದಾಗಿ ಬಳಲುತ್ತಿದ್ದ, ಅನಾರೋಗ್ಯದಿಂದ ಬೇಸತ್ತು ಮೇ12 ರಂದು ಮನೆಯಿಂದ ಹೋದವರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಮಗ ಮಹೇಶ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇನ್ನು ಪೊಲೀಸರ ನೆರವಿನಿಂದ ನದಿಯಲ್ಲಿದ್ದ ಶವವನ್ನು ಮೇಲಕ್ಕೆ ಎತ್ತಲಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ.
TAGGED:
kollegala crime news