ಕರ್ನಾಟಕ

karnataka

ETV Bharat / state

'ಐ ಡೋಂಟ್ ಕೇರ್, ಐ ಡೋಂಟ್ ಲೈಕ್..': ಚಾಮರಾಜನಗರದಲ್ಲಿ ಇಂಗ್ಲೀಷ್​ನಲ್ಲೇ ಲಸಿಕೆ ಬೇಡೆಂದ ವೃದ್ಧ - ವೃದ್ಧನ ಇಂಗ್ಲೀಷ್ ಡೈಲಾಗ್ ವಿಡಿಯೋ ವೈರಲ್

ನರ್ಸ್ ಮತ್ತು ಆಶಾ ಕಾರ್ಯಕರ್ತೆಯರು ಕೋವಿಡ್​ ಲಸಿಕೆ ನೀಡಲು ಹೋದ ವೇಳೆ ಐ ಡೋಂಟ್ ಲೈಕ್, ಐ ಡೋಂಟ್ ಕೇರ್, ಸ್ಟಾಪ್ ಮೀ ಎಂದೆಲ್ಲಾ ಡೈಲಾಗ್ ಹೇಳುವ ಮೂಲಕ ವೃದ್ಧನೋರ್ವ ವ್ಯಾಕ್ಸಿನ್​ ಹಾಕಿಸಿಕೊಳ್ಳುವುದನ್ನು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Video viral
ಇಂಗ್ಲೀಷ್​ನಲ್ಲೇ ಲಸಿಕೆ ಬೇಡೆಂದ ವೃದ್ಧನ ವಿಡಿಯೋ ವೈರಲ್​

By

Published : Dec 3, 2021, 11:02 AM IST

Updated : Dec 3, 2021, 11:19 AM IST

ಚಾಮರಾಜನಗರ: ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದ್ದ ವೇಳೆ ಇಂಗ್ಲೀಷ್​ನಲ್ಲಿ ಡೈಲಾಗ್ ಹೇಳುವ ಮೂಲಕ ವೃದ್ಧನೋರ್ವ ವ್ಯಾಕ್ಸಿನ್ ನಿರಾಕರಿಸಿರುವ ಹಳೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ಕಳೆದ 2-3 ತಿಂಗಳುಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ನರ್ಸ್ ಮತ್ತು ಆಶಾ ಕಾರ್ಯಕರ್ತೆಗೆ ಐ ಡೋಂಟ್ ಲೈಕ್, ಐ ಡೋಂಟ್ ಕೇರ್, ಸ್ಟಾಪ್ ಮೀ ಎಂದೆಲ್ಲಾ ಡೈಲಾಗ್ ಹೇಳುವ ಮೂಲಕ ವೃದ್ಧನೋರ್ವ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ:ಲಸಿಕೆ ಬೇಡವೆಂದು ಮಹಿಳೆ ರಂಪಾಟ: ವಿಡಿಯೋ ವೈರಲ್

ಲಸಿಕೆ ಹಾಕಿಸಿಕೊಂಡ್ರೆ 100 ವರ್ಷ ಬದುಕ್ತೀನಾ?, 100 ವರ್ಷ ಬದುಕುವ ಹಾಗಿದ್ರೆ ಮಾತ್ರ ಲಸಿಕೆ ಕೊಡಿ. ಇಲ್ಲಾಂದ್ರೆ ಬೇಡ, ವ್ಯಾಕ್ಸಿನ್ ಹಾಕಿಸಿಕೊಂಡರೂ ಸಾಯ್ತಿನಿ, ಇಲ್ಲದಿದ್ದರೂ ಸಾಯ್ತಿನಿ. ಐ ಡೋಂಟ್ ಕೇರ್ ಕೊರೊನಾ ಎಂದು ಕುಟುಂಬ ಸದಸ್ಯರ ಮುಂದೆಯೇ ವೃದ್ಧ ವಾಗ್ದಾಳಿ ನಡೆಸಿದ್ದಾನೆ.

Last Updated : Dec 3, 2021, 11:19 AM IST

ABOUT THE AUTHOR

...view details