ಚಾಮರಾಜನಗರ: ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರಿಗಳು ಗೌರವ ಕೊಡುತ್ತಿಲ್ಲ. ಅವರ ಮಾತು ಕೇಳುತ್ತಿಲ್ಲ ಎಂದು ಹಲವರು ಹೇಳುತ್ತಿದ್ದಾರೆ, ಯಾವ ಅಧಿಕಾರಿಯೂ ಶಾಶ್ವತವಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ನಗರದ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ನಾನು ಜಿಲ್ಲೆಗೆ ಬಂದ ತಕ್ಷಣ ಹಲವರು ಮಾಹಿತಿ ಕೊಡುತ್ತಿದ್ದಾರೆ, ಬಿಜೆಪಿ ಕಾರ್ಯಕರ್ತರ ಕೆಲಸಗಳನ್ನು ಅಧಿಕಾರಿಗಳು ಮಾಡುತ್ತಿಲ್ಲ, ಯಾವ ಅಧಿಕಾರಿಯ ಅಧಿಕಾರವು ಶಾಶ್ವತವಲ್ಲ, ಕಾರ್ಯಕರ್ತರು ಯಾರು ತಮ್ಮ ಸ್ವಂತ ಕೆಲಸ ಮಾಡಿಕೊಳ್ಳಲ್ಲ, ಅವರವರ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳನ್ನು ಕೇಳುತ್ತಾರೆ, ಕಾರ್ಯಕರ್ತರಿಗೆ ಗೌರವ ಕೊಡುವ ಕೆಲಸ ಈ ಜಿಲ್ಲೆಯಲ್ಲಾಗಬೇಕು ಎಂದರು.
ತಾ.ಪಂ ಹಾಗೂ ಜಿ.ಪಂ ಚುನಾವಣೆ, ಕಾರ್ಯಕರ್ತರ ಚುನಾವಣೆ, ಜಿಲ್ಲೆಯ 5 ತಾಲೂಕುಗಳ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿನ ಬಾವುಟ ಹಾರಾಡಬೇಕು. ಇನ್ನೆರಡು-ಮೂರು ದಿನಗಳಲ್ಲಿ ಜಿಲ್ಲಾ ಪ್ರವಾಸ ಕೈಗೊಂಡು ಎಲ್ಲಾ ಮಂಡಲದ ಅಧ್ಯಕ್ಷರು, ಕಾರ್ಯಕರ್ತರನ್ನು ಭೇಟಿ ಮಾಡುತ್ತೇನೆ ಎಂದರು.