ಕರ್ನಾಟಕ

karnataka

ETV Bharat / state

ಸಂಸದರ ಸಭೆಯಲ್ಲಿ ಗೇಮ್ ಆಡುತ್ತಾ ಕುಳಿತ ನಗರಸಭೆ ಆಯುಕ್ತ... ವಿಡಿಯೋ - ಚಾಮರಾಜ ನಗರ ಕೆಡಿಪಿ ಸಭೆ

ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆಯಲ್ಲಿ ಇಂದು ಚಾಮರಾಜನಗರ ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮ ಕುರಿತು ಡಿಸಿ ಗಂಭೀರವಾಗಿ ಮಾತನಾಡುತ್ತಿದ್ದರೆ ಚಾಮರಾಜನಗರ ನಗರಸಭೆ ಆಯುಕ್ತ ರಾಜಣ್ಣ ಕ್ಯಾಂಡಿ ಕ್ರಷ್ ಗೇಮ್ ಆಡುವಲ್ಲಿ ನಿರತರಾಗಿದ್ದರು‌.

Mobile
ಮೊಬೈಲ್​

By

Published : Jan 27, 2020, 6:40 PM IST

ಚಾಮರಾಜನಗರ:ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆಯಲ್ಲಿ ಇಂದು ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆಗಳಾಗುತ್ತಿದ್ದರೆ ಇತ್ತ ಅಧಿಕಾರಿಗಳು ಡೆಸ್ಕ್ ನಡಿ ಮೊಬೈಲ್ ಮೊರೆ ಹೋದರು.

ಮೋಬೈಲ್​ನಲ್ಲಿ ತಲ್ಲೀನರಾಗಿರುವ ಅಧಿಕಾರಿಗಳು

ಕೇಂದ್ರ ಸರ್ಕಾರದ ಕಾರ್ಯಕ್ರಮ ಕುರಿತು ಡಿಸಿ ಗಂಭೀರವಾಗಿ ಮಾತನಾಡುತ್ತಿದ್ದರೆ ಚಾಮರಾಜನಗರ ನಗರಸಭೆ ಆಯುಕ್ತ ರಾಜಣ್ಣ ಕ್ಯಾಂಡಿಕ್ರಷ್ ಗೇಮ್ ಆಡುವಲ್ಲಿ ನಿರತರಾಗಿದ್ದರು‌.

ಸಭೆಯ ಆವರಣದಲ್ಲಿ ಜಾಮರ್​ ಅಳವಡಿಸಿದ್ದರೂ, ಅಧಿಕಾರಗಳು ಗೇಮ್ ಆಡುತ್ತಾ, ವಾಟ್ಸಾಪ್​ನಲ್ಲಿ ಬಂದ ಫೋಟೋಗಳು, ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆದಿರುವುದು ವಿಪರ್ಯಾಸವೇ ಸರಿ‌. ಇಷ್ಟು ಸಾಲದೆಂಬತೆ, ಕೆಲವು ಅಧಿಕಾರಿಗಳು ಆಗಾಗ್ಗೆ ಮೊಬೈಲ್ ವೀಕ್ಷಿಸುತ್ತಾ ಸಭೆಯ ಗಂಭೀರತೆ ಮರೆತರು.

ಒಂದು ವರ್ಷದ ನಂತರ ಸಂಸದ ಶ್ರೀನಿವಾಸ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲೂ ಕೂಡ ಈ ಹಿಂದಿನ ಸಭೆಗಳಂತೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಂಡಿತು.

ಈ ಹಿಂದಿನ ಸಭೆಗಳಲ್ಲಿ ಮೊಬೈಲ್​ನಲ್ಲಿ ತಲ್ಲೀನರಾಗುತ್ತಿರುವ ಕುರಿತು ಸಾಕಷ್ಟು ವರದಿ ಮಾಡಿದ್ದರೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತ್ರ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿಲ್ಲ. ಈಗಲಾದರೂ ಡಿಸಿ ಕ್ರಮ ಕೈಗೊಳ್ಳುವರೇ ಎಂಬುದನ್ನು‌ ಕಾದು ನೋಡಬೇಕಿದೆ‌.

ABOUT THE AUTHOR

...view details