ಕರ್ನಾಟಕ

karnataka

ಚಾಮರಾಜನಗರ ಪ್ರವಾಸೋದ್ಯಮಕ್ಕೆ"FULL" ಅವಕಾಶಗಳಿದ್ದರೂ ಇಚ್ಛಾಶಕ್ತಿಯಿಂದ "DULL"

ಶೇ.50 ಕ್ಕೂ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಇದ್ದು ದೇಗುಲ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮದ ಸ್ಥಿತಿ ಅಷ್ಟಕಷ್ಟೇ ಎಂಬ ಪರಿಸ್ಥಿತಿ ಇದ್ದು ಪ್ರವಾಸಿ ತಾಣಗಳಲ್ಲಿ ಜೀವನ ಕಟ್ಟಿಕೊಳ್ಳುವುದು, ಉದ್ಯೋಗ ಕಂಡುಕೊಳ್ಳುತ್ತಿರುವವರು ವಿರಳ.

By

Published : Sep 27, 2021, 1:21 PM IST

Published : Sep 27, 2021, 1:21 PM IST

ಚಾಮರಾಜನಗರ ಪ್ರವಾಸದೋಮ್ಯ
ಚಾಮರಾಜನಗರ ಪ್ರವಾಸದೋಮ್ಯ

ಚಾಮರಾಜನಗರ: ಎರಡು ಹುಲಿ ಸಂರಕ್ಷಿತ ಪ್ರದೇಶಗಳು, ಎರಡು ವನ್ಯಜೀವಿಧಾಮಗಳು, ಎರಡು ಜಲಪಾತಗಳು, ಹತ್ತಾರು ಐತಿಹಾಸಿಕ ದೇಗುಲಗಳು, ನೂರೆಂಟ್ ವೀಕೆಂಡ್ ಸ್ಪಾಟ್ ಗಳಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಚಾಮರಾಜನಗರ ಪ್ರವಾಸೋದ್ಯಮ ಸೊರಗುತ್ತಿದೆ.

ಹೌದು.‌‌.., ಶೇ.50 ಕ್ಕೂ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಇದ್ದು ದೇಗುಲ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮದ ಸ್ಥಿತಿ ಅಷ್ಟಕಷ್ಟೇ ಎಂಬ ಪರಿಸ್ಥಿತಿ ಇದ್ದು ಪ್ರವಾಸಿ ತಾಣಗಳಲ್ಲಿ ಜೀವನ ಕಟ್ಟಿಕೊಳ್ಳುವುದು, ಉದ್ಯೋಗ ಕಂಡುಕೊಳ್ಳುತ್ತಿರುವವರು ವಿರಳ.

ಬಂಡೀಪುರ ಸಫಾರಿ, ಗೋಪಾಲಸ್ವಾಮಿ ಬೆಟ್ಟ ಬಿಳಿಗಿರಿರಂಗನ ಬೆಟ್ಟ ಮತ್ತು ಮಲೆಮಹದೇಶ್ವರ ಬೆಟ್ಟಕಷ್ಟೇ ಹೆಚ್ಚು ಜನರು ಬರುತ್ತಿದ್ದು ಮೂಲಸೌಕರ್ಯದ ಸಮಸ್ಯೆಯೂ ಇದೆ‌. ಜಿಲ್ಲೆಯ ಪಾರಂಪರಿಕ ತಾಣಗಳನ್ನು ಬಿಂಬಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಮೈಸೂರು, ಊಟಿ, ವೈನಾಡಿಗೆ ಬರುವ ಪ್ರವಾಸಿಗರನ್ನು ಜಿಲ್ಲೆಯತ್ತ ಸೆಳೆಯುವ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಯಶ ಕಾಣದ ಚೆಲುವ ಚಾಮರಾಜನಗರ ಯೋಜನೆ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ದೂರದೃಷ್ಟಿ ಇಟ್ಟುಕೊಂಡು ಆರಂಭಿಸಿದ ಚೆಲುವ ಚಾಮರಾಜನಗರ ಯೋಜನೆ ಕೊರೊನಾ ಕಾರಣಕ್ಕೆ ನಿರೀಕ್ಷಿತ ಯಶ ಕಂಡಿಲ್ಲ.‌ ಚಾಮರಾಜನಗರ ಜಿಲ್ಲೆಗೆ ರಾಯಭಾರಿಯಾಗಿ ಚಿತ್ರನಟ ಪುನೀತ್ ರಾಜ್‍ಕುಮಾರ್ ನೇಮಕವಾದರೂ ಪ್ರವಾಸೋದ್ಯಮ ಉತ್ತೇಜನಕ್ಕೆ ಕೊರೊನಾ ಅಡ್ಡಿಯಾಗಿ ಫಲಪ್ರದವಾಗಿಲ್ಲ.

ಇದರೊಟ್ಡಿಗೆ, ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು ಖಾಯಂ ನಿರ್ದೇಶಕರಿಲ್ಲದೇ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ.

ಜಿಲ್ಲೆಯ ಪ್ರಮುಖ ತಾಣಗಳು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (ಬಂಡೀಪುರ ಸಫಾರಿ), ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ (ಕೆ.ಗುಡಿ ಸಫಾರಿ), ಭರಚುಕ್ಕಿ ಜಲಪಾತ, ಹೊಗೆನಕಲ್‌ ಜಲಪಾತ, ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯ, ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಗೋಪಾಲಸ್ವಾಮಿ ದೇವಾಲಯ, ಹುಲುಗನಮುರಡಿ ವೆಂಕಟರಮಣ ಸ್ವಾಮಿ ದೇವಾಲಯ, ಶಿವನಸಮುದ್ರದ ದೇವಾಲಯಗಳು, ಚಾಮರಾಜೇಶ್ವರ ದೇವಾಲಯ, ಶ್ರೀ ಕ್ಷೇತ್ರ ಕನಕಗಿರಿ, ನರಸಮಂಗಲದ ರಾಮಲಿಂಗೇಶ್ವರ ದೇವಾಲಯ, ಯಳಂದೂರಿನ ಬಳೆ ಮಂಟಪ, ಅರ್ಕೇಶ್ವರ ದೇವಾಲಯ, ಗುಂಡಾಲ್‌ ಜಲಾಶಯ, ಸುವರ್ಣಾವತಿ ಜಲಾಶಯ, ಚಿಕ್ಕಹೊಳೆ ಜಲಾಶಯ, ಕರಿವರದರಾಜನಬೆಟ್ಟ, ಯಳಂದೂರಿನ ದಿವಾನ್‌ ಪೂರ್ಣಯ್ಯನವರ ನಿವಾಸ ಮತ್ತು ಛತ್ರ ಇದ್ದು ಗುರುತಿಸದ ಇನ್ನು ಹಲವಾರು ಪುರಾತನ ದೇಗುಲಗಳು, ಸೋಲಿಗರ ಹಾಡುಗಳಿವೆ.

ಇನ್ನಾದರೂ ಸರ್ಕಾರ ಎಚ್ಚೆತ್ತು ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಉದ್ಯೋಗ, ಆದಾಯ ಕಲ್ಪಿಸಬೇಕಿದೆ.

ABOUT THE AUTHOR

...view details