ಕರ್ನಾಟಕ

karnataka

ETV Bharat / state

ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್​ಗೆ ಕೆಎಸ್ಆರ್​ಟಿಸಿ ಬ್ರೇಕ್...!

ಕೊರೊನಾ ಭೀತಿ ಕಡಿಮೆಯಾದ ಹಿನ್ನೆಲೆ ಸ್ಯಾನಿಟೈಸರ್​ ಸಿಂಪಡಣೆ ಮತ್ತು ಥರ್ಮಲ್​ ಸ್ಕ್ರೀನಿಂಗ್​ ಮಾಡುವುದಕ್ಕೆ ಕೆಎಸ್​ಆರ್​​ಟಿಸಿ ಬ್ರೇಕ್​ ಹಾಕಿದೆ.

No sanitize and thermal test, No sanitize and thermal test in KSRTC bus, No sanitize and thermal test in KSRTC bus news, ಸ್ಯಾನೀಟೈಸರ್ ಮತ್ತು ಥರ್ಮಲ್ ಟೆಸ್ಟ್​ಗೆ ಬ್ರೇಕ್,  ಸ್ಯಾನೀಟೈಸರ್ ಮತ್ತು ಥರ್ಮಲ್ ಟೆಸ್ಟ್​ಗೆ ಕೆಎಸ್​ಆರ್​​ಟಿಸಿ ಬ್ರೇಕ್, ಸ್ಯಾನೀಟೈಸರ್ ಮತ್ತು ಥರ್ಮಲ್ ಟೆಸ್ಟ್​ಗೆ ಕೆಎಸ್​ಆರ್​​ಟಿಸಿ ಬ್ರೇಕ್ ಸುದ್ದಿ,
ಸ್ಯಾನೀಟೈಸರ್, ಥರ್ಮಲ್ ಟೆಸ್ಟ್​ಗೆ ಕೆಎಸ್ಆರ್ಟಿಸಿ ಬ್ರೇಕ್

By

Published : Aug 26, 2020, 6:33 PM IST

ಚಾಮರಾಜನಗರ: ಕೊರೊನಾ ಜೊತೆಗೆ ಬಾಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ಜೊತೆಗೆ ಕೋವಿಡ್ ಭೀತಿಯೂ ಕಡಿಮೆಯಾದ ಹಿನ್ನೆಲೆ ಕೆಎಸ್​ಆರ್​​ಟಿಸಿಯು ಪ್ರಯಾಣಿಕರಿಗೆ ಥರ್ಮಲ್​ ಸ್ಕ್ರೀನಿಂಗ್ ನಡೆಸುವುದನ್ನು ನಿಲ್ಲಿಸಿದೆ.

ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್​ಗೆ ಕೆಎಸ್ಆರ್​ಟಿಸಿ ಬ್ರೇಕ್

ನಿಲ್ದಾಣಕ್ಕೆ ಬರುತ್ತಿದ್ದ ಪ್ರತಿ ಪ್ರಯಾಣಿಕರ ದೇಹದ ಉಷ್ಣತೆ ಪರೀಕ್ಷಿಸಿ, ಸೋಂಕು ನಿವಾರಕಗಳನ್ನು ನೀಡಲಾಗುತ್ತಿತ್ತು.‌ ಇದರೊಟ್ಟಿಗೆ, ಪ್ರವೇಶ ಹಾಗೂ ನಿರ್ಗಮನಕ್ಕೆ ಒಂದೇ ದ್ವಾರವನ್ನು ಕೆಎಸ್​ಆರ್​​ಟಿಸಿ ಕಲ್ಪಿಸಿ ಪ್ರತಿಯೊಬ್ಬರ ಮೇಲು ನಿಗಾ ಇಡುವುದಕ್ಕೂ ಪುಲ್ ಸ್ಟಾಪ್ ಹಾಕಲಾಗಿದೆ.

ಈ ಕುರಿತು ಚಾಮರಾಜನಗರ ಕೆಎಸ್​ಆರ್​​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗಮವು ಪ್ರಯಾಣಿಕರ ಥರ್ಮಲ್ ಟೆಸ್ಟ್, ಸ್ಯಾನಿಟೈಸರ್ ಜೊತೆಗೆ ಪ್ರಯಾಣಿಕರ ವಿವರವನ್ನು ಬರೆದುಕೊಳ್ಳುತ್ತಿದ್ದನ್ನು ನಿಲ್ಲಿಸಲಾಗಿದೆ. ಈಗ 30-35 ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದ್ದು, ಹಂತಹಂತವಾಗಿ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗುವುದು ಎಂದರು.

ಅಂತಾರಾಜ್ಯ ಬಸ್​ಗಳನ್ನು ಕಾರ್ಯಾಚರಣೆ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.‌‌‌ ಕೇರಳಕ್ಕೆ ತೆರಳಲು 5 ಬಸ್​ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

ಥರ್ಮಲ್ ಟೆಸ್ಟ್, ಸ್ಯಾನಿಟೈಸರ್ ಕೈಬಿಟ್ಟರೂ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಇನ್ನು ಕೆಲ ತಿಂಗಳು ಮುಂದುವರೆಸುವುದು ಒಳಿತು ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.

For All Latest Updates

ABOUT THE AUTHOR

...view details