ಚಾಮರಾಜನಗರ: ಬಿಎಸ್ ವೈ ಸರ್ಕಾರದ ನೂತನ ಸಂಪುಟದಲ್ಲಿ ಚಾಮರಾಜನಗರಕ್ಕೆ ಯಾವುದೇ ಸಚಿವಸ್ಥಾನ ಸಿಕ್ಕಿಲ್ಲ. ಜಿಲ್ಲೆಗೆ ಪ್ರಾತಿನಿಧ್ಯ ಸಿಗುವುದು ಅನುಮಾನ ಎಂದು ಈಟಿವಿ ಭಾರತ ಜು.24 ರಂದೇ ವರದಿ ಮಾಡಿತ್ತು. ಅದು ಇಂದು ನಿಜವಾಗಿದೆ.
ಬಿಎಸ್‌ವೈ ಸಂಪುಟದಲ್ಲಿ ಗಡಿಜಿಲ್ಲೆಗಿಲ್ಲ ಪ್ರಾತಿನಿಧ್ಯ: ಸೋಮಣ್ಣಗೆ ಉಸ್ತುವಾರಿ ಜವಾಬ್ದಾರಿ? - C.Puttarangashetty
ಬಿಎಸ್ ವೈ ಸರ್ಕಾರದ ನೂತನ ಸಂಪುಟದಲ್ಲಿ ಚಾಮರಾಜನಗರಕ್ಕೆ ಯಾವುದೇ ಮಂತ್ರಿಗಿರಿ ಸಿಕ್ಕಿಲ್ಲ. ಆದರೆ ಇತ್ತ ಜಿಲ್ಲೆಯಲ್ಲಿ ತನ್ನದೇ ಪ್ರಭಾವ ಹೊಂದಿರುವ ಬೆಂಗಳೂರಿನ ವಿಜಯನಗರ ಶಾಸಕ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗುಂಡ್ಲುಪೇಟೆ ಶಾಸಕ ಹೆಚ್.ಎಸ್.ಮಹಾದೇವಪ್ರಸಾದ್ ಮಂತ್ರಿಯಾಗಿದ್ದರು. ಅವರ ನಿಧನದಿಂದ ತೆರವಾದ ಪತ್ನಿ ಗೀತಾ ಮಹಾದೇವ ಪ್ರಸಾದ್ ಚುನಾವಣೆಯಲ್ಲಿ ಗೆದ್ದ ಬಳಿಕ ಮಂತ್ರಿಯಾದರು. ಮೈತ್ರಿ ಸರ್ಕಾರದಲ್ಲಿ ಸಿ. ಪುಟ್ಟರಂಗಶೆಟ್ಟಿ ಮತ್ತು ಬಿಎಸ್‌ಪಿ ಶಾಸಕ ಮಹೇಶ್ ಸಚಿವರಾಗಿದ್ದರು. ರಾಜಕೀಯ ಹೈಡ್ರಾಮಾದಿಂದ ಅಸ್ತಿತ್ವಕ್ಕೆ ಬಂದ ಬಿಎಸ್‌ವೈ ಸರ್ಕಾರದಲ್ಲಿ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರಿಗೆ ನಾಯಕರು ಮಣೆ ಹಾಕಲಿಲ್ಲ. ಮೊದಲ ಬಾರಿ ಶಾಸಕರಾಗಿರುವುದರಿಂದ 2ನೇ ಪಟ್ಟಿಯಲ್ಲೂ ಮಂತ್ರಿಭಾಗ್ಯ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಸೋಮಣ್ಣ ಉಸ್ತುವಾರಿ?
ಜಿಲ್ಲೆಯಲ್ಲಿ ತನ್ನದೇ ಪ್ರಭಾವ ಹೊಂದಿರುವ ಬೆಂಗಳೂರಿನ ವಿಜಯನಗರ ಶಾಸಕ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಇಲ್ಲವೇ ಹನೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಸೋಮಣ್ಣ ಸಾಕಷ್ಟು ಕಸರತ್ತು ನಡೆಸಿದ್ದರು.