ಕರ್ನಾಟಕ

karnataka

ETV Bharat / state

ಬಿಎಸ್​​ವೈ ಸಂಪುಟದಲ್ಲಿ ಚಾಮರಾಜನಗರಕ್ಕೆ ಇಲ್ಲವೇ ಮಂತ್ರಿಗಿರಿ?

ಗುಂಡ್ಲುಪೇಟೆಯಿಂದ ಮೊದಲ ಬಾರಿ ಆಯ್ಕೆಯಾಗಿರುವ ಸಿ.ಎಸ್. ನಿರಂಜನ ಕುಮಾರ್ ಜಿಲ್ಲೆಯ ಏಕೈಕ ಬಿಜೆಪಿ ಶಾಸಕರಾಗಿದ್ದು, ಬಿಎಸ್​​ವೈ ಸರ್ಕಾರದಲ್ಲಿ ಸರ್ಕಾರದ ಹಿತದೃಷ್ಟಿಯಿಂದ ಹಿರಿಯರಿಗಷ್ಟೇ ಮಣೆ ಎನ್ನುತ್ತಿವೆ ಕೆಲ ಮೂಲಗಳು.

By

Published : Jul 24, 2019, 9:28 PM IST

Updated : Jul 24, 2019, 10:38 PM IST

ಬಿಎಸ್​​ವೈ ಸರ್ಕಾರ

ಚಾಮರಾಜನಗರ:ಒಂದೆಡೆ ಸರ್ಕಾರ ರಚಿಸುವ ತವಕದಲ್ಲಿ ಬಿಜೆಪಿ ವರಿಷ್ಠರಿದ್ದರೆ, ಇನ್ನೊಂದೆಡೆ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಲೆಕ್ಕಾಚಾರದ ಮಾತುಗಳು ಜೋರಾಗಿವೆ.

ಸರ್ಕಾರ ರಚನೆಯ ಹೊಸ್ತಿಲಿನಲ್ಲಿರುವ ಬಿಎಸ್​ವೈ, ಚಾಮರಾಜನಗರ ಜಿಲ್ಲೆಗೆ ಮಂತ್ರಿಸ್ಥಾನ ನೀಡುವುದು ಬಹುತೇಕ ಸಂದೇಹವೆಂದು ಪಕ್ಷದ ಆಂತರಿಕ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ಗುಂಡ್ಲುಪೇಟೆಯಿಂದ ಆಯ್ಕೆಯಾಗಿರುವ ಸಿ.ಎಸ್. ನಿರಂಜನ ಕುಮಾರ್ ಜಿಲ್ಲೆಯ ಏಕೈಕ ಬಿಜೆಪಿ ಶಾಸಕರಾಗಿದ್ದು, ಮೊದಲ ಬಾರಿ ಆರಿಸಿ ಬಂದಿರುವುದರಿಂದ ಹಾಗೂ ಮೈಸೂರು ಭಾಗದಲ್ಲಿ ಇನ್ನಿತರೆ ಹಿರಿಯ ಶಾಸಕರಿರುವುದರಿಂದ ಮಂತ್ರಿಸ್ಥಾನದಿಂದ ಈ ಬಾರಿ ಚಾಮರಾಜನಗರ ಜಿಲ್ಲೆಗೆ ವಂಚಿತವಾಗಲಿದೆ ಎಂಬುದು ಪಕ್ಷದ ಮುಖಂಡರ ಮಾತಾಗಿದೆ.

ಬಿಜೆಪಿ ಶಾಸಕ ಸಿ.ಎಸ್. ನಿರಂಜನ ಕುಮಾರ್

ಮೈಸೂರು ಭಾಗದಿಂದ ಎಸ್.ಎ.ರಾಮದಾಸ್, ಕೆ.ಜೆ.ಬೋಪಯ್ಯ, ಅಪ್ಪಚ್ಚುರಂಜನ್, ಒಂದು ವೇಳೆ ಪಕ್ಷಕ್ಕೆ ಬಂದರೆ ಅಡಗೂರು ವಿಶ್ವನಾಥ್ ಅವರಿಗೂ ಹಿರಿತನದ ಆಧಾರದಲ್ಲಿ ಮಂತ್ರಿಸ್ಥಾನ ನೀಡಬೇಕಾದ್ದರಿಂದ ನಿರಂಜನ್​ಗೆ ಮಿನಿಸ್ಟರ್ ಪಟ್ಟ ಒಲಿಯುವುದು ಕಷ್ಟ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಹಿರಿಯರಿಗಷ್ಟೆ ಮಣೆ ಎನ್ನುತ್ತವೆ ಶಾಸಕ ಮೂಲಗಳು‌.

Last Updated : Jul 24, 2019, 10:38 PM IST

For All Latest Updates

TAGGED:

ABOUT THE AUTHOR

...view details