ಚಾಮರಾಜನಗರ:ಕೊರೊನಾ ಕಟ್ಟೆಚ್ಚರವಾಗಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮೂರು ದಿನಗಳ ಕಾಲ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶ್ರಾವಣ ಮಾಸದ ಕೊನೆಯ ದಿನಗಳಾಗಿರುವ ಸೆ. 5ರಿಂದ 7 ಅಂದರೆ ನಾಳೆ ಭಾನುವಾರದಿಂದ ಮಂಗಳವಾರದ ತನಕ ಎಣ್ಣೆಮಜ್ಜನ, ಅಮವಾಸ್ಯೆ ಪೂಜೆ ಹಾಗೂ 108 ಕುಂಭಾಭಿಷೇಕ ನಡೆಯಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಬರುವ ಹಿನ್ನೆಲೆಯಲ್ಲಿ ಮೂರು ದಿನ ಪ್ರವೇಶ ನಿಷೇಧಿಸಿ, ವಿಶೇಷ ಪೂಜೆಯನ್ನು ಸ್ಥಳೀಯವಾಗಿ, ಸರಳವಾಗಿ ಆಚರಿಸಲು ಪ್ರಾಧಿಕಾರ ನಿರ್ಧರಿಸಿದೆ.