ಕರ್ನಾಟಕ

karnataka

ETV Bharat / state

ಅಕ್ರಮ ಜೂಜಾಟ : ದಾಳಿ ನಡೆಸಿ 9 ಜೂಜುಕೋರರನ್ನು ಬಂಧಿಸಿದ ಪೊಲೀಸರು - ಅಕ್ರಮ ಜೂಜಾಟ ಸುದ್ದಿ

ಹೊಂಡರಬಾಳು ಹೊರವಲಯದಲ್ಲಿ ಸಿದ್ದೇಶ್ವರ ಬೆಟ್ಟದ ತಪ್ಪಲಿನ ರಸ್ತೆಯಲ್ಲಿ ಅಕ್ರಮವಾಗಿ ಇಸ್ಪೀಟ್​​ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ..

kollegala
kollegala

By

Published : Jun 6, 2021, 8:25 PM IST

ಕೊಳ್ಳೇಗಾಲ :ಅಕ್ರಮವಾಗಿ ಜೂಜಾಡುತ್ತಿದ್ದವರ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 9 ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ನಡೆದಿದೆ.

ಹೊಂಡರಬಾಳು ಗ್ರಾಮದ ಮಹೇಶ್, ದೊಡ್ಡಿಂದುವಾಡಿ ಗ್ರಾಮದ ಮಹದೇವಸ್ವಾಮಿ, ಕೊಂಗರಹಳ್ಳಿ ಗ್ರಾಮದ ರಾಜೂಗೌಡ, ಹನೂರಿನ ಲಿಂಗರಾಜು, ರಾಜು, ಕೊಳ್ಳೇಗಾಲದ ವಿ.ಮಹಾದೇವ, ಅಬ್ದುಲ್ ನಾಸೀರ್, ಮಹಮ್ಮದ್ ಕಲೀಲ್ ಹಾಗೂ ಸಲ್ಲಾವುದೀನ್ ಬಂಧಿತ ಆರೋಪಿಗಳು.

ಇವರು ಹೊಂಡರಬಾಳು ಗ್ರಾಮದ ಹೊರವಲಯದ ಸಿದ್ದೇಶ್ವರ ಬೆಟ್ಟದ ತಪ್ಪಲಿನ ರಸ್ತೆಯಲ್ಲಿ ಅಕ್ರಮವಾಗಿ ಇಸ್ಟೀಟ್ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ವಿ ಸಿ ಅಶೋಕ್ ತಂಡ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಈ ವೇಳೆ ಪಣಕ್ಕಿಟ್ಟಿದ್ದ 14,800 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details