ಕರ್ನಾಟಕ

karnataka

ETV Bharat / state

ನಿಖಿಲ್​ ಎಲ್ಲಿದ್ದೀಯಪ್ಪಾ...  ಸ್ವಪಕ್ಷೀಯದವರಿಂದಲೇ ಲೇವಡಿ! - kannada news

ತಮ್ಮ ವಾಟ್ಸಾಪ್ ಸ್ಟೇಟಸ್​ನಲ್ಲಿ ನಿಖಿಲ್​ ಎಲ್ಲಿದ್ದೀಯಪ್ಪಾ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಚುನಾವಣೆಯಲ್ಲಿ ಸೋತು ನಿಖಿಲ್ ಪಾಲಿಡಾಲ್ ಕುಡಿದಿದ್ದಾನೆ ಎಂಬ ವ್ಯಂಗ್ಯದ ವಿಡಿಯೋವನ್ನು ಹರಿಬಿಟ್ಟು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದಾರೆ.

ಜೆಡಿಎಸ್ ಜಿಲ್ಲಾಧ್ಯಕ್ಷನ ಸ್ಟೇಟಸ್​

By

Published : May 26, 2019, 12:53 AM IST

Updated : May 26, 2019, 4:06 AM IST

ಚಾಮರಾಜನಗರ:ಲೋಕ ಚುನಾವಣೆ ವೇಳೆ ರಾಜ್ಯವಷ್ಟೇ ಅಲ್ಲದೆ ವಿದೇಶದಲ್ಲೂ ಟ್ರೋಲಾಗಿದ್ದ ' ನಿಖಿಲ್​ ಎಲ್ಲಿದ್ದೀಯಪ್ಪಾ' ಎಂಬ ಡೈಲಾಗ್​ ಇದೀಗ ಜೆಡಿಎಸ್ ಜಿಲ್ಲಾಧ್ಯಕ್ಷರ ಫೋನಿನಲ್ಲೂ ಕಾಣಿಸಿಕೊಂಡಿದೆ.

ಚಾಮರಾಜನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜು ತಮ್ಮ ವಾಟ್ಸಾಪ್ ಸ್ಟೇಟಸ್​ನಲ್ಲಿ ನಿಖಿಲ್​ ಎಲ್ಲಿದ್ದೀಯಪ್ಪಾ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಚುನಾವಣೆಯಲ್ಲಿ ಸೋತು ನಿಖಿಲ್ ಪಾಲಿಡಾಲ್ ಕುಡಿದಿದ್ದಾನೆ ಎಂಬ ವ್ಯಂಗ್ಯದ ವಿಡಿಯೋವನ್ನು ಹರಿಬಿಟ್ಟು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದಾರೆ.

ಜೆಡಿಎಸ್ ಜಿಲ್ಲಾಧ್ಯಕ್ಷನ ಸ್ಟೇಟಸ್​

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಮರಾಜು, ಇದೀಗ ತಮ್ಮ ವಾಟ್ಸಾಪ್ ಸ್ಟೇಟಸ್​ನಲ್ಲಿ ನಿಖಿಲ್​ ಎಲ್ಲಿದ್ದೀಯಪ್ಪಾ ಬರಹ ಹಾಕಿಕೊಂಡು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಈ ವಿಷಯ ಎಲ್ಲಾ ಕಡೆ ಹರಿದಾಡುತ್ತಿದ್ದಂತೆ ತಮ್ಮ ವಾಟ್ಸ್​ ಆಪ್​ ಸ್ಟೇಟಸ್​ಗೆ ಬುದ್ಧನ ಚಿತ್ರವನ್ನು ಹಾಕಿಕೊಂಡಿದ್ದಾರೆ. ಇದರಲ್ಲಿ ಏನೋ ಒಳಾರ್ಥವಿದೆ ಎಂದು ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ.

Last Updated : May 26, 2019, 4:06 AM IST

ABOUT THE AUTHOR

...view details