ಚಾಮರಾಜನಗರ: ನಟ ಧನ್ವೀರ್ ವಿರುದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಮೀಸಲು ಪ್ರದೇಶದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972- ಸೆಕ್ಷನ್ 27(1)ರ ಪ್ರಕಾರ ನಟ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಸಫಾರಿ ಸಮಯದ ಬಳಿಕವೂ ಕಾಡಿನಲ್ಲಿ ಇದ್ದಿದ್ದರಿಂದ ಅತಿಕ್ರಮ ಪ್ರವೇಶ ಎಂದು ಎಫ್ಐಆರ್ ದಾಖಲಿಸಲಾಗಿದೆ. 25 ಸಾವಿರ ರೂ.ವರೆಗೂ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಬಂಡೀಪುರದಲ್ಲಿ ನಟ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲು ವಿಚಾರಣೆ ವರದಿ ಸಲ್ಲಿಕೆ: ನೈಟ್ ಸಫಾರಿ ವಿವಾದದ ಬಳಿಕ ಧನ್ವೀರ್ ಅವರನ್ನು ವಿಚಾರಣೆ ನಡೆಸಿದ್ದ ಆರ್ಎಫ್ಒ ನವೀನ್ ಕುಮಾರ್ ಇಂದು ವರದಿ ಸಲ್ಲಿಸಲಿದ್ದಾರೆ. ಹುಲಿಗೆ ಸಫಾರಿ ಜೀಪಿನ ಲೈಟ್ ಹಾಯಿಸಿ ತೊಂದರೆ ಉಂಟು ಮಾಡಲಾಗಿದೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸುರುವುದಾಗಿ ತಿಳಿದು ಬಂದಿದೆ.
ನಟ ಧನ್ವೀರ್ ಸಫಾರಿ ವಿವಾದದ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ, ಸಂಜೆ 6.30ರ ಒಳಗೆ ಕಾಡು ಬಿಟ್ಟು ಹೊರಗಿರಬೇಕು ಎಂದು ಸಫಾರಿ ಚಾಲಕರು, ಗೈಡ್ಗಳಿಗೆ ಖಡಕ್ ಸೂಚನೆ ನೀಡಿದೆ.