ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದಕ್ಕೆ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಶಾಸಕ ಎನ್.ಮಹೇಶ್ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದಕ್ಕೆ ಹಲ್ಲೆ ಆರೋಪ! - n mahesh news
ಶಾಸಕರ ವಿರುದ್ಧ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಉಪಾಧ್ಯಕ್ಷ ಹನುಮಂತು, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಕಾರ್ಯಕರ್ತ ಚೈನಾರಾಂ ಕಾಪಡಿ ಎಂಬುವರ ಮೇಲೆ ಶಾಸಕ ಎನ್.ಮಹೇಶ್ ಬೆಂಬಲಿಗರಾದ ನಗರಸಭೆ ಸದಸ್ಯ ನಾಸೀರ್ ಶರೀಫ್ ಮತ್ತು ಜಾಕಾವುಲ್ಲ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಎಸ್ಪಿ ಪಟ್ಟಣ ಉಪಾಧ್ಯಕ್ಷ ಹನುಮಂತು, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಕಾರ್ಯಕರ್ತ ಚೈನಾರಾಂ ಕಾಪಡಿ ಎಂಬುವರ ಮೇಲೆ ಶಾಸಕ ಎನ್.ಮಹೇಶ್ ಬೆಂಬಲಿಗರಾದ ನಗರಸಭೆ ಸದಸ್ಯ ನಾಸೀರ್ ಶರೀಫ್ ಮತ್ತು ಜಾಕಾವುಲ್ಲ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು ಸದ್ಯ ಗಾಯಾಳಗಳು ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ಎನ್.ಮಹೇಶ್ ವಿರುದ್ಧ ಇಂದು ಕ್ಷೇತ್ರಾಧ್ಯಕ್ಷ ಎಸ್.ರಾಜಶೇಖರ್ ಮೂರ್ತಿ ಹಾಗೂ ಹಲ್ಲೆಗೊಳಗಾದ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿದ್ದರು. ಈ ಹಿನ್ನೆಲೆ ಸಂಜೆ ರಾಘವೇಂದ್ರ ಬ್ಯಾಂಕರ್ ಮಾಲೀಕ ಹಾಗೂ ಬಿಎಸ್ಪಿ ಕಾರ್ಯಕರ್ತ ಚೈನಾರಾಂ ಕಾಪಡಿ ಅವರ ಅಂಗಡಿಗೆ ಹೋಗಿ, ಅವರ ಬೆಂಬಲಿಗರು ಹಲ್ಲೆ ಮಾಡಿ, ನಿಮಗೆ ಸುದ್ದಿಗೋಷ್ಠಿ ನಡೆಸಲು ಅನುಮತಿ ನೀಡಿದವರು ಯಾರು ಎಂದು ಜಗಳವಾಡಿದ್ದಾರೆ. ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಹ ವೈರಲ್ ಆಗಿದೆ. ಸದ್ಯ, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.