ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ: ಚರಂಡಿ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ - Newborn found in a bag at Chamarajanagar

ಅಂಗನವಾಡಿ ಮುಂಭಾಗದ ಚರಂಡಿಯಲ್ಲಿ ಶಿಶುವಿನ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರ್ ನಡೆಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.

Detection of newborn in dead condition near sewer
ಕೊಳ್ಳೇಗಾಲ: ಚರಂಡಿ ಬಳಿ ಸಾವಿಗೀಡಾದ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆ

By

Published : Dec 6, 2021, 7:23 AM IST

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆಯ ನಾಯಕರ ಬೀದಿಯ ಅಂಗನವಾಡಿ ಮುಂಭಾಗದ ಚರಂಡಿ ಬಳಿ ಶಿಶುವಿನ ಮೃತದೇಹ ಪತ್ತೆಯಾಗಿದೆ. ಸುಮಾರು ಒಂದು ದಿನದ ಮಗು ಇದಾಗಿದ್ದು,‌ ಹೆರಿಗೆಯಾದ ತಕ್ಷಣ ಚೀಲದೊಳಗೆ ಹಾಕಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಬಿಬಿಎಂಪಿ ಕಸದ ವಿರುದ್ಧ ಹೋರಾಟಕ್ಕಿಳಿದಿದ್ದ ಸಾರಥಿ ಸತ್ಯಪ್ರಕಾಶ್ ವಶಕ್ಕೆ ಪಡೆದ ಪೊಲೀಸ್​

ಸ್ಥಳೀಯರು ಮೂಟೆ ತೆರೆದು ನೋಡಿದಾಗ ಶಿಶು ಕಂಡು ಗಾಬರಿಗೊಂಡಿದ್ದಾರೆ. ವಿಷಯ ತಿಳಿದು ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರ್ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ.

ABOUT THE AUTHOR

...view details