ಚಾಮರಾಜನಗರ: ಟಿಸಿ ಕೆಟ್ಟುಹೋಗಿ ಕಳೆದ 10 ದಿನಗಳಿಂದ ಬೆಳೆಗಳಿಗೆ ನೀರು ಹಾಯಿಸದೇ ಕಂಗಾಲಾಗಿದ್ದ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾ.ಪಂ.ವ್ಯಾಪ್ತಿಯ ಉಯಿಲನತ್ತ ಗ್ರಾಮಕ್ಕೆ ಹೊಸ ಟಿಸಿ ಬಂದಿದೆ.
ಚಾಮರಾಜನಗರದ ಉಯಿಲನತ್ತ ಗ್ರಾಮಕ್ಕೆ ಬಂತು ಹೊಸ ಟಿಸಿ: ಈಟಿವಿ ಭಾರತ ವರದಿ ಫಲಶೃತಿ
ಗ್ರಾಮದಲ್ಲಿನ ವಿದ್ಯುತ್ ಪರಿವರ್ತಕ ಸುಟ್ಟುಹೋಗಿ 10 ದಿನವಾಗಿದ್ದರೂ ಚೆಸ್ಕಾಂ ನಿರ್ಲಕ್ಷ್ಯವಹಿಸಿದ್ದರಿಂದ ಆಲೂಗಡ್ಡೆ, ಬೆಳ್ಳುಳ್ಳಿ ಬೆಳೆಗಳು ಒಣಗಿ ಹೋಗುತ್ತಿದ್ದವು. ಹೀಗಾಗಿ, ನೊಂದ ರೈತರು ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದರು. ರೈತರ ಸಮಸ್ಯೆಯ ಕುರಿತು ಈಟಿವಿ ಭಾರತ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಉಯಿಲನತ್ತ ಗ್ರಾಮಕ್ಕೆ ಬಂತು ಹೊಸ ಟಿಸಿ
ಗ್ರಾಮದಲ್ಲಿನ ವಿದ್ಯುತ್ ಪರಿವರ್ತಕ ಸುಟ್ಟುಹೋಗಿ 10 ದಿನವಾಗಿದ್ದರೂ ಚೆಸ್ಕಾಂ ನಿರ್ಲಕ್ಷ್ಯವಹಿಸಿದ್ದರಿಂದ ಆಲೂಗಡ್ಡೆ, ಬೆಳ್ಳುಳ್ಳಿ ಬೆಳೆಗಳು ಒಣಗಿ ಹೋಗುತ್ತಿದ್ದವು. ಹೀಗಾಗಿ, 15ಕ್ಕೂ ಹೆಚ್ಚು ರೈತರು ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದರು.
ಈ ಕುರಿತು ಈಟಿವಿ ಭಾರತ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ವರದಿ ಕಂಡ ಕೂಡಲೇ ಸೆಸ್ಕ್ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿ ಹೊಸ ಪರಿವರ್ತಕ ಅಳವಡಿಸಿದ್ದಾರೆ. ರೈತರು ಹರ್ಷ ವ್ಯಕ್ತಪಡಿಸಿದ್ದು ಈಟಿವಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.