ಚಾಮರಾಜನಗರ :ಹಸಿರಿನಿಂದ ಕಂಗೊಳಿಸುತ್ತಿರುವ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೈಲೂರು ರೇಂಜಿನ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಂಡಿದೆ.
ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸುತ್ತಿವೆ. ಪ್ರತಿ 12 ವರ್ಷಗಳಿಗೊಮ್ಮೆ ಅರಳುವ "ನೀಲಿಕುರವಂಜಿ" ಹೂಗಳು ಘಟ್ಟ ಪ್ರದೇಶಗಳಲ್ಲಿ ಅರಳಿ ನಿಂತಿದ್ದು ಹಸಿರಿನ ಬೆಟ್ಟಕ್ಕೆ ನೀಲಿ ಚಾದರ ಹೊದಿಸಿವೆ.
ಅಪರೂಪದ ಜೀವ ವೈವಿಧ್ಯ ತಾಣವಾಗಿರುವ ಬಿಆರ್ಟಿ ಪ್ರದೇಶದಲ್ಲಿ ನೀಲಿಕುರವಂಜಿ ಹೂವು ಇನ್ನೂ ಜೀವಂತವಾಗಿವೆ. ಪ್ರತಿ 12 ವರ್ಷಕ್ಕೊಮ್ಮೆ ಅರಳುವ ಈ ಹೂ ಅರಣ್ಯವನ್ನು ಭೂಲೋಕದ ಸ್ವರ್ಗವಾಗಿಸುತ್ತಿದೆ.
ಪುಣಜನೂರು, ಬೈಲೂರಿನ ಬೆಟ್ಟಗಳು ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ರಿಂದ ಈ ಹೂವನ್ನು ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಅಂತಲೂ ಕರೆಯುತ್ತಾರೆ ಕೇರಳ ಹಾಗೂ ತಮಿಳುನಾಡಿಗರು.
ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಬೆಟ್ಟದ ಹೂ ನೀಲ ಕುರಿಂಜಿ ಸೊಬಗು ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ.