ಚಾಮರಾಜನಗರ: ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಯು ಆಮೆ ಗತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆಯಲ್ಲಿನ ಕಲ್ಲು ಮತ್ತು ತಗ್ಗುಗಳಿಂದ ಸಾರ್ವಜನಿಕರಿಗೆ ಹಿಂಸೆಯಾಗುತ್ತಿದೆ. ಸ್ವಲ್ಪ ಎಡಕ್ಕೆ ಹೋದರೆ ವಾಹನಗಳು ಹಳ್ಳಕ್ಕೆ ಬೀಳುತ್ತವೆ. ಹಾಗೆಯೇ ಸ್ವಲ್ಪ ಬಲಕ್ಕೆ ಬಂದರೆ ಹಿಂದಿನಿಂದ ಬರುವ ವಾಹನಗಳು ಡಿಕ್ಕಿಯಾಗುತ್ತವೆ. ಇದರ ಜೊತೆಗೆ ದಾರಿಯುದ್ದಕ್ಕೂ ಧೂಳು ಆವರಿಸಿರುತ್ತೆ.
ಈ ಹೆದ್ದಾರಿಯ ಕಾಮಗಾರಿಗೆ 2017ರಲ್ಲಿಯೇ ಅಂದಿನ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹಾದೇವಪ್ಪ ಚಾಲನೆ ನೀಡಿದ್ದರು. 1,330 ಕೋಟಿಯ ಈ ಗುತ್ತಿಗೆಯನ್ನು ಗುಜರಾತ್ ಮೂಲದ ಕಂಪನಿಯೊಂದು ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕಿಮೀ ರಸ್ತೆ ಹಾದುಹೋಗಲಿದೆ. ಆದರೆ ಚಾಲನೆ ಸಿಕ್ಕಷ್ಟೇ ವೇಗವಾಗಿ ಕಾಮಗಾರಿ ನಡೆಯದ ಪರಿಣಾಮ ಪ್ರತಿದಿನವೂ ಬೈಕ್ ಸವಾರರು ಬಿದ್ದು ಗಾಯಗೊಳ್ಳುವ ಪ್ರಕರಣಗಳು ಸಂಭವಿಸುತ್ತಲೇ ಇವೆ.