ಚಾಮರಾಜನಗರ: ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಿದರೇ ಸೊಂಟ, ಬೆನ್ನು ನೋವು ಬರುವುದು ಸಾಮಾನ್ಯ. ಆದರೆ, ಇಲ್ಲೊಂದು ಹೆದ್ದಾರಿಯಲ್ಲಿ ನೀವು ಚಲಿಸುವಾಗ ಈ ಸ್ಥಳಕ್ಕೆ ಭೇಟಿ ನೀಡಿದರೆ ಕೀಲು, ಮಂಡಿ ನೋವಿನಂತಹ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತದೆ.
ಸುಮಾರು ವರ್ಷಗಳಿಂದಲೂ ಈ ರಸ್ತೆ ಮಧ್ಯೆ ಕಲ್ಲು ಒಂದಿದ್ದು ಕೀಲು ನೋವು, ಮಂಡಿ ನೋವಿನಿಂದ ಬಳಲುವವರು ಇಲ್ಲಿಗೆ ಬಂದು ನಮಸ್ಕರಿಸಿ ಪೂಜೆ ಸಲ್ಲಿಸಿದರೆ ಸಮಸ್ಯೆ ಪರಿಹಾರವಾಗುತ್ತದಂತೆ. ವಾಹನ ಸವಾರರು, ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ರಸ್ತೆಯಲ್ಲಿ ಹಾದು ಹೋಗುವಾಗ ಇದಕ್ಕೆ ನಮಿಸಿ ಹೋಗುವುದು ನಿತ್ಯ ಕಾಣಬಹುದಾದ ಸಾಮಾನ್ಯ ದೃಶ್ಯವಾಗಿದೆ.
ಹೌದು, ಯಳಂದೂರಿನಿಂದ ಮಾಂಬಳ್ಳಿಗೆ ತೆರಳುವಾಗ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ "ನರಿಕಲ್ಲು" ಎಂಬ ಮಾರಮ್ಮ ಹಲವು ದಶಕಗಳಿಂದ ಇದ್ದು ಮಂಡಿನೋವು, ಕೀಲುನೋವಿನಿಂದ ಬಳಲುವರು ಒಂದು ನಮಸ್ಕಾರ ಹಾಕಿದರೇ ಸಾಕು ಎಲ್ಲ ನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇನ್ನೊಂದು ವಿಚಾರ ಅಂದರೆ ಇದು ರಸ್ತೆಯ ಮಧ್ಯೆಯೇ ಇದ್ದು ಭಾರಿ ವಾಹನಗಳ ಸಂಚಾರದ ನಡುವೆಯೂ ಜನರು ಇಲ್ಲಿ ನಮಸ್ಕರಿಸಿ ಭಕ್ತಿಯನ್ನು ಮೆರೆಯುತ್ತಾರೆ.
ರಾಷ್ಟ್ರೀಯ ಹೆದ್ದಾರಿಯೇ ಕ್ಲಿನಿಕ್.. ಮಂಡಿ, ಕೀಲು ನೋವಿಗೆ ಈ ರಸ್ತೆಯಲ್ಲಿದೆ ಮದ್ದು!! ಈ ಕುರಿತು ಸ್ಥಳೀಯರಾದ ಸುಶೀಲಾ, ಜಯಮ್ಮ ಎನ್ನುವವರು ಮಾತನಾಡಿ, ತಾವು ಮದುವೆಯಾಗಿ ಬಂದಾಗಿನಿಂದ ಈ ನರಿಕಲ್ಲು ಮಾರಮ್ಮನನ್ನು ನೋಡುತ್ತಿದ್ದು ಮಂಡಿ ನೋವು, ಕೈ-ಕಾಲು ಸೆಳೆತ ಇದ್ದರೇ ಇಲ್ಲಿ ಬಂದು ಪೂಜೆ ಮಾಡುತ್ತೇವೆ. ಇದರಿಂದ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಗಂಟಾಗುಂಡಿ ಎನ್ನುವ ಮಧ್ಯೆ ಮಾರಮ್ಮನ ಕಲ್ಲು ಇದ್ದು, ಮಂಡಿ, ಕೀಲು ನೋವಿಂದ ಬಳಲುವವರು ಇಲ್ಲಿ ಬಂದು ಪೂಜಿಸಿದರೆ ಸಮಸ್ಯೆ ಪರಿಹಾರ ಆಗುವುದ ಅಚ್ಚರಿಯ ಸಂಗತಿಯಾಗಿದೆ.
ಇದನ್ನೂ ಓದಿ:ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ