ಚಾಮರಾಜನಗರ :ಸುತ್ತೂರುಶ್ರೀ, ಸಿದ್ಧಗಂಗಾಶ್ರೀ ಸೇರಿ ನೂರು ಸ್ವಾಮೀಜಿಗಳ ಸಮ್ಮುಖದಲ್ಲಿ ನಾಗೇಂದ್ರಸ್ವಾಮಿ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ 17ನೇ ಪೀಠಾಧಿಪತಿಯಾದರು.
ಪರ-ವಿರೋಧದ ನಡುವೆ 100 ಸ್ವಾಮೀಜಿಗಳ ಸಮ್ಮುಖದಲ್ಲಿ ಸಾಲೂರು ಮಠಾಧಿಪತಿಯಾದ ನಾಗೇಂದ್ರಸ್ವಾಮಿ - 17th pithadipathi of Salur Math
600 ವರ್ಷಗಳ ಇತಿಹಾಸವಿರುವ ಸಾಲೂರು ಮಠಕ್ಕೆ ಉತ್ತರಾಧಿಕಾರಿ ವಿಚಾರ ಸಾಕಷ್ಟು ವಿವಾದ, ಗೊಂದಲ ಮೂಡಿಸಿತ್ತು. ಶುಕ್ರವಾರವೂ ಕೂಡ ನಾಗೇಂದ್ರಸ್ವಾಮಿ ಆಯ್ಕೆ ವಿರುದ್ಧ ಕೆಲ ಭಕ್ತರು ಪ್ರತಿಭಟನೆ ನಡೆಸಿದ್ದರು..
ಕರವೀರಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ರಾತ್ರಿಯಿಂದ ವಿವಿಧ ಧಾರ್ಮಿಕ ವಿಧಿ ವಿಧಾನ ನಡೆದಿದ್ದು, ಇಂದು ಪ್ರಾತಃಕಾಲದಲ್ಲಿ ಪಂಚಕಳಸ, ಅಷ್ಟದಿಕ್ಫಾಲರ ಪೂಜೆ, ನಾಂಧಿ ಸಮಾರಾಧನೆ, ಸಪ್ತ ಸಭಾಧಿದೇವತೆಗಳ ಪೂಜೆಗಳಾದ ಬಳಿಕ ವಿಧಿವತ್ತಾಗಿ ನಾಗೇಂದ್ರಸ್ವಾಮಿ ಪಟ್ಟಾಭಿಷೇಕಗೊಂಡರು.
600 ವರ್ಷಗಳ ಇತಿಹಾಸವಿರುವ ಸಾಲೂರು ಮಠಕ್ಕೆ ಉತ್ತರಾಧಿಕಾರಿ ವಿಚಾರ ಸಾಕಷ್ಟು ವಿವಾದ, ಗೊಂದಲ ಮೂಡಿಸಿತ್ತು. ಶುಕ್ರವಾರವೂ ಕೂಡ ನಾಗೇಂದ್ರಸ್ವಾಮಿ ಆಯ್ಕೆ ವಿರುದ್ಧ ಕೆಲ ಭಕ್ತರು ಪ್ರತಿಭಟನೆ ನಡೆಸಿದ್ದರು. ಮಠದ ಗುರುಸ್ವಾಮಿ ಆನಾರೋಗ್ಯದಿಂದ ಬಳಲುತ್ತಿದ್ದು, ಕಿರಿಯ ಸ್ವಾಮೀಜಿ ವಿಷಪ್ರಸಾದ ದುರಂತದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ.