ಕೊಳ್ಳೇಗಾಲ:ಅಕ್ರಮವಾಗಿ ನಾಡ ಬಂದೂಕು ತೆಗೆದುಕೊಂಡು ಕಾಡು ಪ್ರಾಣಿಗಳ ಭೇಟೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿ, ಅವರಿಂದ ಎರಡು ನಾಡ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.
ಕಾಡು ಪ್ರಾಣಿಯ ಭೇಟಿಗೆ ಸಂಚು ರೂಪಿಸಿ ಹೊಂಚು ಹಾಕಿದ್ದ ಇಬ್ಬರ ಬಂಧನ - ನಾಡ ಬಂದೂಕು ವಶ
ಕಾಡು ಪ್ರಾಣಿಗಳ ಭೇಟೆಗೆ ಹೊಂಚು ಹಾಕಿ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ ಎರಡು ನಾಡ ಬಂದೂಕು ವಶಪಡಿಸಿಕೊಂಡಿದ್ದಾರೆ.
ಬಂಧನ
ತಾಲೂಕಿನ ಜಾಗೇರಿ ಹಳೇ ಕೋಟೆ ಗ್ರಾಮದ ತಂಗಮಣಿ, ಶಿಲುವೈಪುರ ಗ್ರಾಮದ ಅಮಲ್ ಸೆಲ್ವಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಸತ್ತೇಗಾಲ ಸಮೀಪದ ಪಾಸ್ಕಲ್ ಗ್ರಾಮದ ಬಳಿ ಇರುವ ಜಪಮಾಲೆ ಮಾದಗುಡ್ಡ ಅರಣ್ಯ ಕಾಲು ದಾರಿಯ ಮೂಲಕ ಅಕ್ರಮ ಬಂದೂಕನ್ನು ತೆಗೆದುಕೊಂಡು ಹೋಗಿ ಕಾಡು ಪ್ರಾಣಿ ಭೇಟೆಯಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬೆನ್ನಟ್ಟಿದ ಸಿಪಿಐ ಶ್ರೀಕಾಂತ್ ಹಾಗೂ ಪಿಎಸ್ಐ ವಿ.ಸಿ ಅಶೋಕ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.