ಚಾಮರಾಜನಗರ :ವೈಯಕ್ತಿಕವಾಗಿ ಟೀಕೆ ಮಾಡಿದರೇ ನನ್ನಲ್ಲೂ ಬಹಳಷ್ಟು ವಿಚಾರಗಳಿವೆ, ನಾನೂ ಮಾತನಾಡಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಶಾಸಕ ಎನ್ ಮಹೇಶ್ ಟಾಂಗ್ ನೀಡಿದರು.
ವೈಯಕ್ತಿಕ ಟೀಕೆ ಮಾಡಿದ್ರೆ, ನನ್ನಲ್ಲೂ ಬಹಳಷ್ಟು ವಿಚಾರಗಳಿವೆ : ಶಾಸಕ ಎನ್ ಮಹೇಶ್ ವಾರ್ನಿಂಗ್ - ಶಾಸಕ ಮಹೇಶ್ ಕುರಿತು ಆರ್ ಧ್ರುವನಾರಾಯಣ ಹೇಳಿಕೆ
ಧ್ರುವನಾರಾಯಣ ಅವರ ಮೇಲೆ ನನಗೆ ಸಾಕಷ್ಟು ಗೌರವವಿದೆ. ಆದರೆ, ಇತ್ತೀಚೆಗೆ ಬಹಳ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ನನ್ನಲ್ಲೂ ಬಹಳಷ್ಟು ವಿಚಾರಗಳಿವೆ. ಗೌರವದಿಂದ ಹೇಳುತ್ತಿದ್ದೀನಿ, ನನ್ನ ವೈಯಕ್ತಿಕ ವಿಚಾರಕ್ಕೆ ಬರುವುದು ಸರಿಯಿಲ್ಲ..
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧ್ರುವನಾರಾಯಣ ಅವರ ಮೇಲೆ ನನಗೆ ಸಾಕಷ್ಟು ಗೌರವವಿದೆ. ಆದರೆ, ಇತ್ತೀಚೆಗೆ ಬಹಳ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ನನ್ನಲ್ಲೂ ಬಹಳಷ್ಟು ವಿಚಾರಗಳಿವೆ. ಗೌರವದಿಂದ ಹೇಳುತ್ತಿದ್ದೀನಿ, ನನ್ನ ವೈಯಕ್ತಿಕ ವಿಚಾರಕ್ಕೆ ಬರುವುದು ಸರಿಯಿಲ್ಲ ಎಂದು ನಿನ್ನೆಯಷ್ಟೇ ಧ್ರುವನಾರಾಯಣ ಮಾಡಿದ್ದ ಟೀಕೆಗಳಿಗೆ ಮಹೇಶ್ ಎಚ್ಚರಿಕೆ ಮಾತು ಹೇಳಿದರು.
ನಾನು ಷರತ್ತು ರಹಿತವಾಗಿ, ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಪಕ್ಷಕ್ಕೆ ಸೇರಿದ್ದೇನೆ. ಜವಾಬ್ದಾರಿ ಕೊಡಬೇಕಾದ್ದು ಹೈಕಮಾಂಡ್ ಮತ್ತು ಸಿಎಂ. ಅವರು ಯಾವುದೇ ಜವಾಬ್ದಾರಿ ಕೊಟ್ಟರು, ಸಚಿವ ಸ್ಥಾನ ನೀಡಿದರು ನಿಭಾಯಿಸುತ್ತೇನೆ. ನಾನು ಮಂತ್ರಿಗಿರಿಗಾಗಿ ಯಾವುದೇ ಲಾಬಿ ಮಾಡಿಲ್ಲ, ನನ್ನ ಪಕ್ಷದ ವರಿಷ್ಠರ ಭೇಟಿ ತೀರಾ ಸೌಹಾರ್ದವಾಗಿತ್ತು ಎಂದು ತಿಳಿಸಿದರು.