ಚಾಮರಾಜನಗರ: ಬಿಎಸ್ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಬಿಜೆಪಿ ಸರ್ಕಾರವನ್ನು ಮತ್ತು ಸಿಎಂ ಬಿಎಸ್ವೈ ಅವರನ್ನು ಬಾಯ್ತುಂಬ ಹೊಗಳಿದ್ರು.
ಕೊಳ್ಳೇಗಾಲದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸೋಮಣ್ಣ ಭೇಟಿ ನೀಡಿದ ಬಳಿಕ ನಡೆಸಿದ ಸುದ್ದಿಗೋಷ್ಟಿಯಲ್ಲಿ ಶಾಸಕ ಮಹೇಶ್ ಮಾತನಾಡಿ, ನೆರೆಗೆ ಸಂಪೂರ್ಣ ತುತ್ತಾದ ಮನೆಗೆ ೫ ಲಕ್ಷ ರೂ. ಕೊಡುವ ಐತಿಹಾಸಿಕ ತೀರ್ಮಾನವನ್ನು ಬಿಜೆಪಿ ಸರ್ಕಾರ ಮಾಡಿದೆ. ಜಖಂಗೊಂಡ ಮನೆಗಳಿಗೂ 1 ಲಕ್ಷ ರೂ. ಘೋಷಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇದೆ. ಬಿ.ಎಸ್. ಯಡಿಯೂರಪ್ಪ ಅವರಿಗೂ ಇದೆ ಎಂದರು.