ಚಾಮರಾಜನಗರ:ಕೊರೊನಾ ವಾರಿಯರ್ ಆದ ಅಂಗನವಾಡಿ ಕಾರ್ಯಕರ್ತೆಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಹನೂರು ತಾಲೂಕಿನ ಶಾಗ್ಯದಲ್ಲಿ ನಡೆದಿದೆ.
ಕೊರೊನಾ ವಾರಿಯರ್ಗೆ ಕೊಲೆ ಬೆದರಿಕೆ: ಪುಂಡರ ಕೃತ್ಯಕ್ಕೆ ಪತಿಯೂ ಸಾಥ್..! - ಅಂಗನವಾಡಿ ಕಾರ್ಯಕರ್ತೆಗೆ ಕೊಲೆ ಬೆದರಿಕೆ
ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ಮಾಡುವ ವೇಳೆ ಪುಂಡರು ಅಂಗನವಾಡಿ ಕಾರ್ಯಕರ್ತೆಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ.
ಕವಿತಾ
ಕವಿತಾ ಎಂಬ ಕೊರೊನಾ ವಾರಿಯರ್ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ಮಾಡುವ ವೇಳೆ ಮನೆಯೊಳಗೆ ಜೂಜಾಡುತ್ತಿದ್ದ 9 ಮಂದಿ ಪುಂಡರು ಕೊಲೆ ಬೆದರಿಕೆ ಹಾಕಿ, ಸಮೀಕ್ಷೆ ಬಗ್ಗೆ ಪ್ರಶ್ನಿಸಿ, ಜೂಜಾಟವನ್ನು ಯಾರಿಗೂ ತಿಳಿಸದಂತೆ ತಾಕೀತು ಮಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ.
ಇಷ್ಟು ಸಾಲದೆಂಬಂತೆ ಪುಂಡರ ಮಾತು ಕೇಳಿಕೊಂಡು ಬಂದ ಪತಿ ಕವಿತಾಗೆ ಹಲ್ಲೆ ಮಾಡಿ ಗಾಯಗೊಳಿಸಿರುವ ಪ್ರಸಂಗವೂ ನಡೆದಿದೆ. ಸದ್ಯ, ಮಹೇಶ, ರಾಜ, ಪ್ರದೀಪ್ , ಬೆಟ್ಡಣ್ಣ, ಶೇಖರ್, ಸಿದ್ದಪ್ಪ, ನಾಗ ಸೇರಿದಂತೆ 9 ಮಂದಿ ವಿರುದ್ಧ ಹನೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.