ಚಾಮರಾಜನಗರ: ಜಮೀನಿನ ಬೇಲಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವ ಕೊಲೆಯಾಗಿರುವ ಘಟನೆ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಉಪಾಧ್ಯಕ್ಷೆ ಶಶಿಕಲಾ ಅವರ ತಂದೆ ಗುರುಸ್ವಾಮಿ (60) ಕೊಲೆಯಾಗಿದ್ದಾರೆ.
ಗುರುಸ್ವಾಮಿ ಅವರ ಪುತ್ರ ಮಂಜುನಾಥ್ ಅವರಿಗೂ ಗಂಭೀರ ಗಾಯಗಳಾಗಿದ್ದು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಜಮೀನಿನ ಬೇಲಿ ವಿಚಾರಕ್ಕೆ ಗಲಾಟೆ ನಡೆದು ಮಲ್ಲಿಕಾರ್ಜುನ, ಮಲೆಮಾದಪ್ಪ ಹಾಗೂ ಮಂಗಲ ಎಂಬವರು ದೊಣ್ಣೆ, ಮಚ್ಚಿನಿಂದ ಹಲ್ಲೆ ನಡೆಸಿ ಗುರುಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.