ಚಾಮರಾಜನಗರ:ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದೆ.
ಜಮೀನಿನಲ್ಲಿ ಟ್ರ್ಯಾಕ್ಟರ್ ಹಾದು ಹೋಗಿದ್ದಕ್ಕೆ ಬಿತ್ತು ಒಂದು ಹೆಣ!! - Chamrajnagar crime news
ಕ್ಷುಲ್ಲಕ ಕಾರಣಕ್ಕೆ ರೈತರ ನಡುವೆ ಹಲವಾರು ದಿನಗಳಿಂದ ಎದ್ದಿದ್ದ ತಕರಾರು ಓರ್ವನ ಕೊಲೆಯೊಂದಿಗೆ ಅಂತ್ಯಗೊಂಡಿದೆ. ಸದ್ಯ ಕೊಲೆ ಆರೋಪಿಯನ್ನು ವಶಕ್ಕೆ ಪಡೆದು ಚಾಮರಾಜನಗರ ಗ್ರಾಮಾಂತರ ಪಿಎಸ್ಐ ಲೋಹಿತ್ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊತ್ತಲವಾಡಿ ಗ್ರಾಮದ ಪುಟ್ಟಸ್ವಾಮಯ್ಯ (65) ಕೊಲೆಯಾದ ದುರ್ದೈವಿ. ಅದೇ ಗ್ರಾಮದ ಸ್ವಾಮಿ (55) ಎಂಬಾತ ಪುಟ್ಟಸ್ವಾಮಯ್ಯರ ಜಮೀನಿನಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ್ದರಿಂದ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಕುಪಿತಗೊಂಡಿದ್ದ ಸ್ವಾಮಿ ಕಲ್ಲಿನಲ್ಲಿ ಹಲ್ಲೆ ನಡೆಸಿದ್ದರಿಂದ ಪುಟ್ಟಸ್ವಾಮಯ್ಯರ ಎದೆಮೂಳೆಗಳು ಮುರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇವರಿಬ್ಬರೂ ಅಕ್ಕಪಕ್ಕದ ಜಮೀನಿನವರಾಗಿದ್ದಾರೆ. ಅಳತೆ ವಿಚಾರವಾಗಿ ಹಲವಾರು ದಿನಗಳಿಂದ ತಕರಾರು ಎದ್ದಿತ್ತು ಎಂದು ತಿಳಿದು ಬಂದಿದೆ.ಸದ್ಯ ಆರೋಪಿ ಸ್ವಾಮಿಯನ್ನು ವಶಕ್ಕೆ ಪಡೆದು ಚಾಮರಾಜನಗರ ಗ್ರಾಮಾಂತರ ಪಿಎಸ್ಐ ಲೋಹಿತ್ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.