ಚಾಮರಾಜನಗರ: ಅರಳಿಕಟ್ಟೆಯಲ್ಲಿ ಕುಳಿತಿದ್ದ ಯುವಕನಿಗೆ ಚಾಕು ಇರಿದು ಸ್ನೇಹಿತನೇ ಕೊಲೆ ಮಾಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪಟ್ಟಣದ ನಾಯಕರ ಬಡಾವಣೆ ನಿವಾಸಿ ಸಂಜಯ್(27) ಕೊಲೆಯಾದ ಯುವಕ. ಅದೇ ಬಡಾವಣೆಯ ಅಭಿ ಎಂಬಾತ ಆರೋಪಿ.
ಡ್ಯಾನ್ಸ್ ಕಿರಿಕ್: ನಿಶ್ಚಿತಾರ್ಥ ಆಗಬೇಕಿದ್ದ ಗೆಳೆಯನಿಗೆ ಚಾಕು ಇರಿದು ಕೊಲೆ - murder by friend
ಗುಂಡ್ಲುಪೇಟೆ ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಜಯ್ ಎಂಬಾತನನ್ನು ಆತನ ಸ್ನೇಹಿತನೇ ಕೊಲೆಗೈದಿದ್ದಾನೆ.
ಚಾಮರಾಜನಗರದಲ್ಲಿ ಕೊಲೆ
ಕಳೆದ ನಾಲ್ಕೈದು ದಿನಗಳ ಹಿಂದೆ ನಡೆದಿದ್ದ ಪಟ್ಟದರಾಣಿ ಹಬ್ಬದಲ್ಲಿ ನೃತ್ಯದ ವಿಚಾರದಲ್ಲಿ ಸಂಜಯ್ ಮತ್ತು ಅಭಿ ನಡುವೆ ಆರಂಭವಾದ ದ್ವೇಷ ಮುಂದುವರಿದು ಸೋಮವಾರ ರಾತ್ರಿ ಸಂಜಯ್ಗೆ ಅಭಿ ಏಕಾಏಕಿ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಸಂಜಯ್ ಬುಧವಾರ ನಿಶ್ಚಿತಾರ್ಥ ಮಾಡಿಕೊಳ್ಳುವವನಿದ್ದ ಎಂದು ಮೂಲಗಳು ತಿಳಿಸಿವೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡ್ಲುಪೇಟೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:'ನನಗೆ ಮುಸ್ಲಿಮರ ಮತಗಳ ಅಗತ್ಯವಿಲ್ಲ, ಹಿಂದೂಗಳ ಮತಗಳು ಸಾಕು': ಶಾಸಕ ಹರೀಶ್ ಪೂಂಜಾ