ಚಾಮರಾಜನಗರ:ಚಾಮರಾಜನಗರ ನಗರಸಭೆ ಆಯುಕ್ತರಿಗೆ ಅವಾಚ್ಯವಾಗಿ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದ ಆರೋಪದಡಿ ನಗರಸಭಾ ಸದಸ್ಯನಿಗೆ ಜೆಎಂಎಫ್ಸಿ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಚಾಮರಾಜನಗರದ 14 ನೇ ವಾರ್ಡಿನ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಶಿಕ್ಷೆಗೊಳಗಾದ ನಗರಸಭಾ ಸದಸ್ಯರಾಗಿದ್ದಾರೆ.
ಚಾಮರಾಜನಗರ ನಗರಸಭೆ ಆಯುಕ್ತರಿಗೆ ನಿಂದನೆ; ನಗರಸಭಾ ಸದಸ್ಯನಿಗೆ 1 ವರ್ಷ ಜೈಲು - ಜೆಎಂಎಫ್ಸಿ ನ್ಯಾಯಾಲಯದಿಂದ ಆರ್. ಪಿ. ನಂಜುಂಡಸ್ವಾಮಿಗೆ ಶಿಕ್ಷೆ ಪ್ರಕಟ
2010 ನವೆಂಬರ್ 11 ರಂದು ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಚಾಮರಾಜನಗರ ನಗರಸಭೆ ಆಯುಕ್ತರಾಗಿದ್ದ ಎಸ್. ಪ್ರಕಾಶ್ ಅವರನ್ನು ಕಾಮಗಾರಿ ಬಿಲ್ ವಿಚಾರ ಸಂಬಂಧ ನಂಜುಂಡಸ್ವಾಮಿ ಅವಾಚ್ಯ ಶಬ್ಧದಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು ಎಂದು ಗಂಭೀರ ಆರೋಪ ಮಾಡಲಾಗಿತ್ತು.
2010 ನವೆಂಬರ್ 11 ರಂದು ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಚಾಮರಾಜನಗರ ನಗರಸಭೆ ಆಯುಕ್ತರಾಗಿದ್ದ ಎಸ್. ಪ್ರಕಾಶ್ ಅವರನ್ನು ಕಾಮಗಾರಿ ಬಿಲ್ ವಿಚಾರ ಸಂಬಂಧ ನಂಜುಂಡಸ್ವಾಮಿ ಅವಾಚ್ಯ ಶಬ್ಧದಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು. ನಂಜುಂಡಸ್ವಾಮಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೆಎಂಎಫ್ಸಿ ನ್ಯಾಯಾಧೀಶ ರೋಶನ್ ಬೇಗ್ ಶಾ 1 ವರ್ಷ ಸಾದಾ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಎಪಿಪಿ ಎ. ಸಿ ಮಹೇಶ್ ವಾದ ಮಂಡಿಸಿದ್ದರು.
ಇದನ್ನೂ ಓದಿ:ವರದಕ್ಷಿಣೆ ಕಿರುಕುಳ: ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ