ಚಾಮರಾಜನಗರ/ ಕೊಳ್ಳೇಗಾಲ:ಕೊರೊನಾ ಕಟ್ಟೆಚ್ಚರವಾಗಿ ಕರ್ಫ್ಯೂ ಜಾರಿ ಇದ್ದರೂ ಇದನ್ನು ಧಿಕ್ಕರಿಸಿ ತಿರುಗುತ್ತಿದ್ದ ಪುಂಡರಿಗೆ ಎರಡನೇ ದಿನವೂ ಪೊಲೀಸರು ಲಾಠಿ ಬಿಸಿ ತೋರಿಸಿದ್ದಾರೆ. ಹಾಗೆಯೇ ಕೊಳ್ಳೇಗಾಲದಲ್ಲಿ ಬೀದಿಬದಿ ವ್ಯಾಪರಿಗಳಂತೂ ಅಲ್ಲಲ್ಲಿ ಮಾರಟಕ್ಕೆ ನಿಂತು ಜನಸಂದಣಿ ಹೆಚ್ಚಿಸುತ್ತಿದ್ದು, ಅಂಗಡಿ ಖಾಲಿ ಮಾಡದಿದ್ದರೆ ಅವರ ವಿರುದ್ಧ ನೋಟಿಸ್ ನೀಡಬೇಕಾಗುತ್ತದೆ ಎಂದು ನಗರಸಭೆ ಆಯುಕ್ತ ನಾಗಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಗೆ ಕ್ಲಾಸ್: ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮದ ಎಚ್ಚರಿಕೆ - ನಿಯಮ ಉಲಂಘಸಿದವರಿಗೆ ನೋಟಿಸ್
ಕರ್ಫ್ಯೂ ಜಾರಿ ಇದ್ದರೂ ಇದನ್ನು ಧಿಕ್ಕರಿಸಿ ತಿರುಗುತ್ತಿದ್ದ ಮತ್ತು ಜನಸಂದಣಿ ಹೆಚ್ಚಿಸುತ್ತಿದ್ದ ಬೀದಿಬದಿ ವ್ಯಾಪಾರಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಆದೇಶದಂತೆ ನಗರಸಭೆ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಾಲು, ದಿನಸಿ ಸೇರಿದಂತೆ ಹಣ್ಣು, ತರಕಾರಿ ಮಾರಾಟ ಮಾಡುವುದಕ್ಕೆ ನಿಗದಿತ ಸ್ಥಳ ಗೊತ್ತು ಮಾಡಿದ್ದಾರೆ. ಆದರೆ ಬೀದಿಬದಿ ವ್ಯಾಪಾರಿಗಳು ಮನಬಂದಂತೆ ರಸ್ತೆ ಮಾರ್ಗದಲ್ಲಿಯೇ ಹಣ್ಣು, ತರಕಾರಿ ಮಾರುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ನಾಗಶೆಟ್ಟಿ, ಅಂಗಡಿ ಖಾಲಿ ಮಾಡದಿದ್ದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರಗುಸಿ ನೋಟಿಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿ ನಿಯಮ ಮೀರಿ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಖಾಲಿ ಮಾಡಿಸಿದರು.
ಇನ್ನು ಚಾಮರಾಜನಗರದಲ್ಲಿ ತರಕಾರಿ ಅಂಗಡಿಗಳ ಮುಂದೆ ಸುಖಾಸುಮ್ಮನೆ ಜನರು ಗುಂಪಾಗಿ ಬಂದು ನಿಲ್ಲುತ್ತಿದ್ದರಿಂದ ತರಕಾರಿ ಅಂಗಡಿಗಳನ್ನು ಇಂದು ಬಂದ್ ಮಾಡಿಸಲಾಯಿತು. ಪೊಲೀಸರು ಗಲ್ಲಿ ಗಲ್ಲಿಗೂ ತೆರಳಿ ಅಡ್ಡಾಡುತ್ತಿದ್ದ ಪುಂಡರಿಗೆ ಬಿಸಿ ಮುಟ್ಟಿಸಿದರು. ಸಾಮಾಜಿಕ ಅಂತರವನ್ನೇ ಮರೆತು ಲೋಕದ ಪರಿವಿಲ್ಲದಂತೆ ಅಡ್ಡಾಡುತ್ತಿದ್ದ ಜನರಿಗೆ ಇದೇ ವೇಳೆ ಪೊಲೀಸರು ತಿಳಿಹೇಳಿದರು.