ಚಾಮರಾಜನಗರ:ಕೊರೊನಾ ತಡೆ ಕ್ರಮವಾಗಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮುಡಿಸೇವೆಗೆ ನಿರ್ಬಂಧವಿದ್ದರೂ ರಾಜಾರೋಷವಾಗಿ ಮುಡಿಸೇವೆ ನಡೆಯುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.
ನಿರ್ಬಂಧದ ನಡುವೆ ಮಾದಪ್ಪನ ಬೆಟ್ಟದಲ್ಲಿ ಮುಡಿಸೇವೆ ದೇವಾಲಯದಲ್ಲಿ ದರ್ಶನಕ್ಕಷ್ಟೇ ಅವಕಾಶವಿದ್ದು, ಉಳಿದೆಲ್ಲ ಸೇವೆ, ಉತ್ಸವಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬರುವ ಭಕ್ತರನ್ನು ಸುಲಿಗೆ ಮಾಡಲಾಗುತ್ತಿದೆ. ನಿರ್ಬಂಧವನ್ನು ಉಲ್ಲಂಘನೆ ಮಾಡುವ ಜೊತೆಗೆ ಮುಡಿಸೇವೆಗೆ 50 ರೂ.ದರ ನಿಗದಿಯಾಗಿದ್ದರೂ 300-500 ರೂ. ವಸೂಲಿ ಮಾಡಿ ಮುಡಿ ತೆಗೆಯುತ್ತಿದ್ದಾರಂತೆ.
ಮಾದಪ್ಪನ ಬೆಟ್ಟದಲ್ಲಿ ನಡೆಯುತ್ತಿದ್ದ ಮುಡಿಸೇವೆಯನ್ನು ಎರಡು ದಿನಗಳಿಂದ ನಿಲ್ಲಿಸಿದ್ದರೂ ಮತ್ತೆ ಆರಂಭವಾಗಿದ್ದು, ತಾಳಬೆಟ್ಟದಲ್ಲೂ ಕೆಲವರು ಕದ್ದಮುಚ್ಚಿ ಮುಡಿ ತೆಗೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ದುಪ್ಪಟ್ಟು ದುಡ್ಡು ಕೊಟ್ಟು ಭಕ್ತರು ಮುಡಿ ತೆಗೆಸೆವುದು ಅನಿವಾರ್ಯವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಕೊರೊನಾ ರೂಲ್ಸ್ ಬ್ರೇಕ್ ಮುಡಿ ತೆಗೆಯುತ್ತಿದ್ದುದನ್ನು ನಿಲ್ಲಿಸಿದ ಬಳಿಕವೂ ಮತ್ತೆ ರಾಜಾರೋಷವಾಗಿ ನಡೆಯುತ್ತಿರುವುದು ಪ್ರಾಧಿಕಾರದ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ. ಅಂದಹಾಗೆ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗಳಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರನ್ನು ಸಂಪರ್ಕಿಸಿತರಾದರೂ ಪ್ರತಿಕ್ರಿಯೆಗೆ ಸಿಗಲಿಲ್ಲ.
ಇದನ್ನೂಓದಿ: ಕೋವಿಡ್ ಲಸಿಕೆ ಪಡೆಯದವರಿಗೆ ಪಿಂಚಣಿ, ಪಡಿತರ ಇಲ್ಲವೆಂಬ ಯೋಜನೆ ರೂಪಿಸಿಲ್ಲ: ಸರ್ಕಾರದ ಸ್ಪಷ್ಟನೆ