ಕರ್ನಾಟಕ

karnataka

ETV Bharat / state

3 ದಶಕದಿಂದ ಹುತ್ತದ ಮಣ್ಣಿನಲ್ಲಿ ಅರಳುತ್ತಿರುವ ಗಣಪ.. ಭಕ್ತಿಯ ಜತೆಗೆ ಪರಿಸರ ಪ್ರೇಮ ನಿಜಕ್ಕೂ ಮಾದರಿ! - pop ganesha

ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಕಲ್ಪನಮ್ಮ ಎಂಬವರು ಕಳೆದ 32 ವರ್ಷದಿಂದ ನೇಮ-ನಿಷ್ಠೆಯಿಂದ ಮಣ್ಣಿನಲ್ಲಿ ಗಣಪನನ್ನು ತಯಾರಿಸಿ ಪೂಜಿಸುತ್ತಾ ಬಂದಿದ್ದಾರೆ. 3 ದಶಕದಿಂದ ಹುತ್ತದ ಮಣ್ಣಿನಲ್ಲಿ ಇವರು ತಯಾರಿಸುತ್ತಿರುವ ಗಣಪ ಪರಿಸರ ಸ್ನೇಹಿ ಕೂಡ ಹೌದು.

3 ದಶಕದಿಂದ ಹುತ್ತದ ಮಣ್ಣಿನಲ್ಲಿ ಅರಳುತ್ತಿರುವ ಗಣಪ:‌ ಭಕ್ತಿಯುತ ಪರಿಸರ ಪ್ರೇಮ ನಿಜಕ್ಕೂ ಮಾದರಿ!

By

Published : Sep 1, 2019, 11:31 PM IST

ಚಾಮರಾಜನಗರ:ಗಣೇಶ ಚತುರ್ಥಿ ಬಂದರೆ ಥಟ್ಟನೆ ನೆನಪಾಗುವುದು ಮಾರುಕಟ್ಟೆಯಲ್ಲಿನ ಬಣ್ಣ-ಬಣ್ಣದ ಗಣಪಗಳು. ಆದರೆ, ಇಲ್ಲೊಬ್ಬರು ಬರೋಬ್ಬರಿ 32 ವರ್ಷಗಳಿಂದ ಮಣ್ಣಿನ ಗಣಪನನ್ನು ತಯಾರಿಸಿ ಪೂಜಿಸುತ್ತಾ ಬಂದಿದ್ದಾರೆ. ಅವರ ಕಲೆ, ಪರಿಸರ ಪ್ರೇಮ ನಿಜಕ್ಕೂ ಮೆಚ್ಚಲೇಬೇಕಾದದ್ದು.

3 ದಶಕದಿಂದ ಹುತ್ತದ ಮಣ್ಣಿನಲ್ಲಿ ಅರಳುತ್ತಿರುವ ಗಣಪ:‌ ಭಕ್ತಿಯುತ ಪರಿಸರ ಪ್ರೇಮ ನಿಜಕ್ಕೂ ಮಾದರಿ!

ಗೌರಿ ಹಬ್ಬ ಬಂತೆಂದರೆ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದಿಂದ ಕೂಡಿದ ಸುಂದರ ಪಿಒಪಿ ಗಣೇಶ ಎಲ್ಲರ ಗಮನ ಸೆಳೆಯುತ್ತಾನೆ. ಆದರೆ ಭೂಮಿ, ದನ ಕರುಗಳನ್ನೇ ದೇವರೆಂದು ಪೂಜಿಸುವ ಕೆಲ ಗ್ರಾಮಗಳ ರೈತ ಕುಟುಂಬಗಳಂತೂ ಸಗಣಿಯ ಕೆರಕಲು ಗಣಪತಿ ತಯಾರಿಸಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಹಾಗೆಯೇ ಇಲ್ಲೊಬ್ಬ ಅಜ್ಜಿ ಮೊಮ್ಮಗ ಮಣ್ಣಿನ ಗಣಪತಿ ತಯಾರಿಸಿ ಪೂಜಿಸುವ ಮೂಲಕ ಪರಿಸರ ಪ್ರೇಮವನ್ನು ಮೆರೆಯುತ್ತಿದ್ದಾರೆ.

ಅಂದಹಾಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಕಲ್ಪನಮ್ಮ ಎಂಬವರು ಕಳೆದ 32 ವರ್ಷದಿಂದ ನೇಮ-ನಿಷ್ಠೆಯಿಂದ ಮಣ್ಣಿನಲ್ಲಿ ಗಣಪನನ್ನು ತಯಾರಿಸಿ ಪೂಜಿಸುತ್ತಾ ಬಂದಿದ್ದಾರೆ. ಈ 32 ವರ್ಷದಲ್ಲಿ ಇವರ ಭಕ್ತಿ- ತಾಳ್ಮೆ ಒಂದಿನಿತೂ ಕಡಿಮೆಯಾಗಿಲ್ಲವಂತೆ. ಪ್ರತೀ ಬಾರಿ ಇವರು ಸ್ನಾನಮಾಡಿ ಮಡಿಬಟ್ಟೆ ಉಟ್ಟು, ಉಪವಾಸದಲ್ಲಿದ್ದು ಹುತ್ತದ ಮಣ್ಣಿನಲ್ಲಿ ಗಣಪನ ಮೂರ್ತಿ ತಯಾರಿಸುತ್ತಾರೆ. ನಂತರ ಹಬ್ಬದ ದಿನದಂದು ತಮ್ಮ ಶ್ರಮದಿಂದ ಮೂಡಿಬಂದ ಗೌರಿ-ಗಣಪನಿಗೆ ಅರಿಶಿಣ-ಕುಂಕುಮ ಹಚ್ಚಿ, ಹೂಗಳಿಂದ ಅಲಂಕರಿಸಿ ಪೂಜಿಸುತ್ತಾರೆ.

ಮಣ್ಣಿನ ಗಣಪತಿ ತಯಾರಿಸಿ ಪೂಜಿಸುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿರುವ ಕಲ್ಪನಮ್ಮ

ಅಂದಿನ ಆ ಪ್ರಯತ್ನ ಇಂದಿಗೂ ಸಂಪ್ರದಾಯದಂತೆ ಮುಂದುವರೆದಿದೆ. ಅಜ್ಜಿಯ ಗಣಪನ ತಯಾರಿಕೆ ಕಂಡು ಕಳೆದ ೨ ವರ್ಷದಿಂದ ಮೊಮ್ಮಗನೂ ಅಜ್ಜಿಯೊಂದಿಗೆ ಗಣಪನ‌ ಮೂರ್ತಿ ತಯಾರಿಸಿ ಪೂಜಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಒಟ್ಟಿನಲ್ಲಿ ಪ್ರತಿ ವರ್ಷ ಸ್ವಂತ ಶ್ರಮದಿಂದ ತಯಾರಿಸಿದ ಮಣ್ಣಿನ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಪರಿಸರಕ್ಕೂ ಹಾನಿಯಾಗದಂತೆ ಗಣೇಶನ ಪೂಜಿಸುತ್ತಾ ಬಂದಿರುವ‌ ಇವರ ವಿನಾಯಕನ ಮೇಲಿನ ಭಕ್ತಿ ನಿಜಕ್ಕೂ ಮಾದರಿ.

ABOUT THE AUTHOR

...view details