ಚಾಮರಾಜನಗರ: ಇಂದಿನಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಹಲವೆಡೆ ಆಲಿಕಲ್ಲು, ಗುಡುಗು ಸಹಿತ ಮಳೆ ಆರಂಭವಾಗಿದೆ. ಕೇರಳದಲ್ಲಿ ಮುಂಗಾರು ಪ್ರವೇಶಿಸಿದ 4-5 ದಿನಗಳ ಬಳಿಕ ಜಿಲ್ಲೆಯಲ್ಲಿ ವರುಣ ಆರ್ಭಟಿಸಿದ್ದು, ಹಲವೆಡೆ ಬಿರುಸಿನ ಮಳೆ ಸುರಿದಿದೆ. ಸಂಜೆ ದಿಢೀರ್ ಒಂದೂವರೆ ತಾಸಿಗೂ ಹೆಚ್ಚು ಕಾಲ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮುಂಗಾರು ಚುರುಕು.. ಹಲವೆಡೆ ಆಲಿಕಲ್ಲು ಸಹಿತ ಮಳೆ - Monsoon rains begin in Chamarajanagar district
ಕೇರಳದಲ್ಲಿ ಮುಂಗಾರು ಪ್ರವೇಶಿಸಿದ 4-5 ದಿನಗಳ ಬಳಿಕ ಜಿಲ್ಲೆಯಲ್ಲಿ ವರುಣ ಆರ್ಭಟಿಸಿದ್ದು, ಹಲವೆಡೆ ಬಿರುಸಿನ ಮಳೆ ಸುರಿದಿದೆ. ಸಂಜೆ ದಿಢೀರ್ ಒಂದೂವರೆ ತಾಸಿಗೂ ಹೆಚ್ಚು ಕಾಲ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮುಂಗಾರು ಚುರುಕು : ಹಲವೆಡೆ ಆಲಿಕಲ್ಲು ಸಹಿತ ಮಳೆ
ಚಾಮರಾಜನಗರ ತಾಲೂಕಿನ ಮುತ್ತಿಗೆ, ಯಾಲಕ್ಕೂರು ಭಾಗದಲ್ಲಿ ಆಲಿಕಲ್ಲುಗಳ ಸಹಿತ ಮಳೆಯಾಗಿದೆ. ಸಂಜೆ ಹೊತ್ತು ಮಳೆ ಸುರಿದಿದ್ದರಿಂದ ಯಳಂದೂರಲ್ಲಿ ಸಂತೆ ವ್ಯಾಪಾರಿಗಳು, ಇತರೆ ಬೀದಿಬದಿ ವ್ಯಾಪಾರಿಗಳು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜನರು ಪರದಾಡುವಂತಾಯಿತು. ಪೂರ್ವ ಮುಂಗಾರುನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು ಮುಂಗಾರು ಮಳೆಯೂ ಆಶಾದಾಯಕವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಓದಿ :ಎಗ್ರೈಸ್ ಅಂಗಡಿಯಲ್ಲಿ ಅಗ್ನಿ ಆಕಸ್ಮಿಕ: ಘಟನೆ ನೋಡಲು ಬಂದಾಗ ಸಿಲಿಂಡರ್ ಸ್ಫೋಟ, ಇಬ್ಬರು ದುರ್ಮರಣ