ಕರ್ನಾಟಕ

karnataka

ETV Bharat / state

ಮೇಲ್ಮನೆ ಚುನಾವಣೆಯಲ್ಲಿ ಕಾಂಚಾಣದ ಸದ್ದು: ರಘು ಕೌಟಿಲ್ಯ ವಿರುದ್ಧ ಆರೋಪ - ಮೇಲ್ಮನೆ ಚುನಾವಣೆಯಲ್ಲಿ ಕಾಂಚಾಣದ ಸದ್ದು

ಪಕ್ಷದ ಮುಖಂಡರು, ಜಿಲ್ಲಾಧ್ಯಕ್ಷರು ಇರುವ 'ಚಾಮರಾಜನಗರ ಬಿಜೆಪಿ' ಎಂಬ ವಾಟ್ಸ್​​ ಆ್ಯಪ್​​ ಗುಂಪಿನಲ್ಲಿ ಕಾಂಚಾಣದ ಚರ್ಚೆ ನಡೆದಿದೆ.

Money Distribution allegations against Raghu kautilya
ಶಾಸಕ ಎನ್‌.ಮಹೇಶ್ ಹಾಗು ಅಭ್ಯರ್ಥಿ ರಘು ಕೌಟಿಲ್ಯ

By

Published : Dec 9, 2021, 11:24 AM IST

ಚಾಮರಾಜನಗರ: ಮೇಲ್ಮನೆ ಚುನಾವಣೆಯಲ್ಲಿ ನೀರಿನಂತೆ ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಚಾಮರಾಜನಗರ ಬಿಜೆಪಿ ವಾಟ್ಸ್​​ ಆ್ಯಪ್​ ಗುಂಪಿನಲ್ಲಿ ನಡೆದ​ ಚರ್ಚೆಯೊಂದು ಪುಷ್ಟಿ ನೀಡಿದೆ. ಜನಸ್ವರಾಜ್ ಯಾತ್ರೆಗೆ ಅಭ್ಯರ್ಥಿ ರಘು ಕೌಟಿಲ್ಯ ಪ್ರತಿ ಗ್ರಾ.ಪಂಗೆ 5 ಸಾವಿರ ರೂ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವಾಟ್ಸ್​​ ಆ್ಯಪ್​​ ಚಾಟ್ ವೈರಲ್​​ ಆಗಿರುವ ಕುರಿತು ಶಾಸಕ ಎನ್‌.ಮಹೇಶ್ ಹಾಗು ಅಭ್ಯರ್ಥಿ ರಘು ಕೌಟಿಲ್ಯ ಸ್ಪಷ್ಟನೆ ನೀಡಿದರು.

ಏನಿದು ಚರ್ಚೆ?:

ಕಳೆದ ತಿಂಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಈಶ್ವರಪ್ಪ, ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆದ ಜನ ಸ್ವರಾಜ್ ಯಾತ್ರೆಯ ಖರ್ಚು ವೆಚ್ಚಕ್ಕೆ, ಗ್ರಾ.ಪಂ ಸದಸ್ಯರನ್ನು ಕರೆತರಲು ಪ್ರತಿ ಗ್ರಾ.ಪಂಗೆ ಅಭ್ಯರ್ಥಿ ರಘು ಕೌಟಿಲ್ಯ 5 ಸಾವಿರ ರೂ. ಹಣ ಕೊಟ್ಟಿದ್ದರಂತೆ.‌ ಆದರೆ, ಸ್ವಪಕ್ಷದ ಮುಖಂಡರೇ ಈ ಹಣವನ್ನು ಗುಳುಂ ಮಾಡಿ ಅರ್ಧಂಬರ್ಧ ಕಾಸು ಕೊಟ್ಟಿದ್ದಾರೆಂದು ವಾಟ್ಸ್​​ ಆ್ಯಪ್​​ ಗ್ರೂಪ್​​ನಲ್ಲಿ ಚರ್ಚೆಯಾಗಿದೆ.

ಅಭ್ಯರ್ಥಿ ಕೊಟ್ಟ ಹಣವನ್ನು ಸರಿಯಾಗಿ ವಿತರಿಸದಿರುವ ಬಗ್ಗೆ ‌ಕಾರ್ಯಕರ್ತರು ಗರಂ ಆಗಿ "ಎಂಜಲು ಕಾಸು ತಿನ್ನುವವರು, ದೇಶಕ್ಕೆ ದುಡಿಯುವ ತಾಕತ್ತಿಲ್ಲ, ತಿಂದು ತೇಗಲು ಪಕ್ಷಕ್ಕೆ ಬರುತ್ತಾರೆ. ಇವರ ಜನ್ಮಕ್ಕೆ ಬೆಂಕಿ ಹಾಕ ಎಂದು ಬೈದಾಡಿದ್ದಾರೆ.

ಗ್ರಾಮಾಂತರ ಮಂಡಲ ಅಧ್ಯಕ್ಷರನ್ನು ಕೇಳಿದರೆ, ಜಿಲ್ಲಾಧ್ಯಕ್ಷರಿಗೆ ಉಳಿದ ಹಣ ಕೊಟ್ಟಿರುವುದಾಗಿ ಹೇಳುತ್ತಾರೆ. ಕೆಲ ಗ್ರಾ.ಪಂಗಳಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಎಂಜಲು ಕಾಸು ತಿಂದವರು ಮಾತನಾಡುತ್ತಿಲ್ಲ. ಜಿಲ್ಲಾ ಬಿಜೆಪಿ ಮುಖಂಡರು ಮಾತನಾಡಬೇಕು ಎಂದು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಟ್ಟುಕಥೆ ಎಂದ ಅಭ್ಯರ್ಥಿ:

ವಾಟ್ಸ್​​ ಆ್ಯಪ್​​ ಚಾಟ್ ವೈರಲ್​​ ಆಗಿರುವ ಕುರಿತು ಶಾಸಕ ಎನ್‌.ಮಹೇಶ್ ಹಾಗು ಅಭ್ಯರ್ಥಿ ರಘು ಕೌಟಿಲ್ಯ ಜಂಟಿಯಾಗಿ ಮಾತನಾಡಿ, ವಾಟ್ಸ್​​ ಆ್ಯಪ್​​ ಚರ್ಚೆ ಸತ್ಯಕ್ಕೆ ದೂರವಾಗಿದ್ದು, ಯಾರಿಗೂ ಹಣವನ್ನು ಕೊಟ್ಟಿಲ್ಲ. ಕೆಲ ವಿಕೃತ ಮನಸ್ಸುಗಳು ಸೃಷ್ಟಿಸಿರುವ ಕಟ್ಟುಕಥೆಯಾಗಿದ್ದು ಇವುಗಳಿಗೆ ಯಾರೂ ಕಿವಿಗೊಡಬಾರದು ಮನವಿ ಮಾಡಿದ್ದಾರೆ.

ABOUT THE AUTHOR

...view details