ಕರ್ನಾಟಕ

karnataka

ETV Bharat / state

ಮೋದಿ ಬಂಡೀಪುರ ಭೇಟಿಗೆ ದಿನಗಣನೆ-ಭದ್ರತೆ ಕೈಗೊಳ್ಳಲು ಎಡಿಜಿಪಿ ಅಲೋಕ್ ಕುಮಾರ್​ ಎಂಟ್ರಿ - 1973 ರಲ್ಲಿ ಪ್ರಾಜೆಕ್ಟ್ ಟೈಗರ್

ಬಂಡೀಪುರಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ-ಸಕಲ ಸಿದ್ದತೆ ತಯಾರಿಯಲ್ಲಿದೆ ಬಂಡೀಪುರ.

tiger
ಬಂಡೀಪುರ

By

Published : Apr 4, 2023, 6:04 PM IST

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ ಬಂಡೀಪುರ ಭೇಟಿಗೆ ದಿನಗಣನೆ ಆರಂಭವಾಗಿದ್ದು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಕಲ ತಯಾರಿ ನಡೆಸುತ್ತಿದೆ. ಯಾವುದೇ ಅಹಿತಕರ ಹಾಗೂ ಭದ್ರತಾ ಲೋಪ ಉಂಟಾಗದ ರೀತಿ ಬಿಗಿ ಭದ್ರತೆ ಕೈಗೊಳ್ಳುವ ಉದ್ದೇಶದಿಂದ ಎಡಿಜಿಪಿ ಅಲೋಕ್ ಕುಮಾರ್ ಅವರಿಂದು ಬಂಡೀಪುರಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬಂಡೀಪುರ ಸಫಾರಿ ಕೇಂದ್ರದ ಸಮೀಪವೇ 3 ಹೆಲಿಪ್ಯಾಡ್ ನಿರ್ಮಾಣಗೊಳ್ಳುತ್ತಿದ್ದು ಸಾರ್ವಜನಿಕರು, ಅಭಿಮಾನಿಗಳನ್ನು ನಿಯಂತ್ರಿಸಲು ಸೂಕ್ತ ಬ್ಯಾರಿಕೇಡ್, ಕಾಂಪೌಂಡ್ ವ್ಯವಸ್ಥೆ ಇರಬೇಕು, ವನ್ಯಜೀವಿಗಳು ರಸ್ತೆ ದಾಟುವುದನ್ನು ನಿಗಾ ಇಡಬೇಕು ಸೇರಿದಂತೆ ಇತರೆ ಸೂಚನೆಗಳನ್ನು ಐಜಿಪಿ ಮಧುಕರ್ ಪವಾರ್ ಹಾಗೂ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೋ ಅವರಿಗೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ, ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕ್ರಮ: ಅರುಣ್ ಸಿಂಗ್

ಏಪ್ರಿಲ್​ 9 ರಂದು ಬಂಡೀಪುರಕ್ಕೆ ಬರಲಿರುವ ವಿಶೇಷ ಹೆಲಿಕಾಪ್ಟರ್ ಮೂಲಕ ನರೇಂದ್ರ ಮೋದಿ ಬರಲಿದ್ದು ಸಫಾರಿ, ರಾಂಪುರ ಆನೆ ಶಿಬಿರಕ್ಕೆ ಭೇಟಿ ಕೊಡಲಿದ್ದಾರೆ. ಜೊತೆಗೆ, ಮಾವುತರ ಜೊತೆ ಸಂವಾದ ನಡೆಸಲಿದ್ದು ಅದಾದ ಬಳಿಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳುವರು ಎಂದು ತಿಳಿದುಬಂದಿದೆ. ಮೋದಿ ಅವರ ಅಧಿಕೃತ ಪ್ರವಾಸ ಪಟ್ಟಿ ಇನ್ನೂ ಕೂಡ ಬಿಡುಗಡೆಯಾಗಿಲ್ಲ. ಆದರೆ, ಪ್ರಧಾನಿ ಬಂಡೀಪುರಕ್ಕೆ ಭೇಟಿ ಕೊಡುವ ಸಾಧ್ಯತೆ ತೀರಾ ಹೆಚ್ಚಿದೆ.

ಮೋದಿಯವರ ಆಗಮನದ ಕುರಿತು ಮೊನ್ನೆ ತಾನೇ ಬಂಡೀಪುರದ ಸಿಎಫ್​ ರಮೇಶ್​ ಕುಮಾರ್​ರವರು ಪ್ರತಿಕ್ರಿಯಿಸಿದ್ದರು. ಮೋದಿ ಅವರು ಬಂಡೀಪುರಕ್ಕೆ ಭೇಟಿ ಕೊಡುವ ಸಾಧ್ಯತೆ ಇರುವುದರಿಂದ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಹಾಗೆ ಆನೆ ಉಳಿಸಿದ ಸಿಬ್ಬಂದಿಗೆ ಸ್ಮರಣಿಕೆ ನೀಡುವುದರ ಜೊತೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೋಳ್ಳುವ ಬಗ್ಗೆ ಯೋಜಿಸಲಾಗುತ್ತಿದೆ ಎಂದಿದ್ದರು.

ಅತಿ ಹೆಚ್ಚು ಹುಲಿಗಳಿರುವ ಸಂರಕ್ಷಿತ ಪ್ರದೇಶ ಬಂಡೀಪುರ: 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಘೋಷಿಸಿದ್ದು, ಯೋಜನೆಯಲ್ಲಿ ಬಂಡೀಪುರವೂ ಸೇರಿದೆ. ಇದರ ಜೊತೆಗೆ, ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳಿರುವ ಸಂರಕ್ಷಿತ ಪ್ರದೇಶವೂ ಇದಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಮಧುಮಲೈ ಮತ್ತು ಕೇರಳದ ವಯನಾಡು ಅರಣ್ಯ ಪ್ರದೇಶದ ಗಡಿ ಹೊಂದಿದ್ದು, 1973ರಲ್ಲಿ ಹುಲಿ ಯೋಜನೆ ಘೋಷಿಸಿದ ವೇಳೆ ಕೇವಲ 10-15 ಹುಲಿಗಳಿದ್ದವು. ಈಗ ಇರುವ ಮಾಹಿತಿಗಳ ಪ್ರಕಾರ ಅವುಗಳ ಸಂಖ್ಯೆ 150 ದಾಟಿದೆ. ಇನ್ನು ಪ್ರಧಾನಿ ಮೋದಿಯವರು ಇಲ್ಲಿ ಬಂದು ಸಫಾರಿ ಮಾಡಿದರೆ ಮರೆಯಾಲರದಂತ ನೆನಪಿನ ಕ್ಷಣವಾಗಿರಲಿದೆ ಎಂಬುದು ಅರಣ್ಯಾಧಿಕಾರಿಗಳ ಮಾತಾಗಿದೆ.

ಇದನ್ನೂ ಓದಿ:ಅರೆ ಮಿಲಿಟರಿ ಪಡೆಯ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಬೇಲೂರು ರಥೋತ್ಸವ

ABOUT THE AUTHOR

...view details