ಕರ್ನಾಟಕ

karnataka

ETV Bharat / state

ಈಶ್ವರಪ್ಪ ರಾಷ್ಟ್ರದ್ರೋಹಿ ಅಲ್ಲ- ಮೇಕೆದಾಟು ಪಾದಯಾತ್ರೆಯಿಂದ ಪ್ರಯೋಜನವಿಲ್ಲ : ವಾಟಾಳ್ ನಾಗರಾಜ್ - ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿಕೆ

ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ಬಳಸುತ್ತಿರುವ ರಾಷ್ಟ್ರದ್ರೋಹಿ ಪದ ಬಳಕೆ ಸರಿಯಲ್ಲ. ರಾಷ್ಟ್ರದ್ರೋಹಿಯ ಕಾರ್ಯ ನನಗೇನು ಕಂಡುಬಂದಿಲ್ಲ. ಈಶ್ವರಪ್ಪ ಹಾರಾಟ-ಕೂಗಾಟ ಹೊಸದೇನಲ್ಲ, ಅವರ ಮಾತಿಗೆ ಬ್ರೇಕಿಲ್ಲ, ಆದರೆ ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯುವುದು ಸರಿಕಾಣಲಿಲ್ಲ ಎಂದು ಈಶ್ವರಪ್ಪ ಪರ ವಾಟಾಳ್ ಬ್ಯಾಟ್ ಬೀಸಿದ್ದಾರೆ..

ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್

By

Published : Feb 20, 2022, 5:00 PM IST

ಚಾಮರಾಜನಗರ :ಕಾಂಗ್ರೆಸ್ ಎರಡನೇ ಹಂತದಲ್ಲಿ ನಡೆಸಲಿರುವ ಮೇಕೆದಾಟು ಪಾದಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪಾದಯಾತ್ರೆಯಿಂದ ಯಾವುದೇ ಪ್ರಯೋಜನವಾಗಲ್ಲ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಮೊದಲು ಧ್ವನಿ ಎತ್ತಿ ತೀವ್ರ ಹೋರಾಟ ಮಾಡಿದ್ದು ಮೊದಲು ನಾವು, ಕಾಂಗ್ರೆಸ್ ಸರ್ಕಾರ ಇದ್ದಾಗ ಏನು ಮಾಡಿದ್ದರು ಎಂದು ಪಾದಯಾತ್ರೆಗೆ ಟಾಂಗ್ ಕೊಟ್ಟರು.

ಮೇಕೆದಾಟು ಪಾದಯಾತ್ರೆ ಕುರಿತಂತೆ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿರುವುದು..

ಡಿಕೆಶಿ ಇಂಧನ, ಜಲಸಂಪನ್ಮೂಲ ಸಚಿವರಾಗಿದ್ದಾಗ ಯೋಜನೆ ಅನುಷ್ಠಾನಕ್ಕೆ ತಡೆದವರು ಯಾರು..?, ಪಾದಯಾತ್ರೆ ಮಾಡದೇ ಕೈಬಿಡಿ, ಇವೆಲ್ಲಾ ರಾಜಕೀಯವಷ್ಟೇ, ಪಾದಯಾತ್ರೆಯನ್ನೇ ಅವರು ಮಾಡಬಾರದಿತ್ತು, ಕೆಲಸ ಮಾಡಬೇಕಿತ್ತು. ಆದರೆ, ಕಾಂಗ್ರೆಸ್ ಸರ್ಕಾರ, ಡಿಕೆಶಿ ಅಧಿಕಾರದಲ್ಲಿದ್ದಾಗ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಬ್ರೇಕ್ ಇಲ್ಲದ ಈಶ್ವರಪ್ಪ ರಾಷ್ಟ್ರದ್ರೋಹಿ ಅಲ್ಲ :ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ಬಳಸುತ್ತಿರುವ ರಾಷ್ಟ್ರದ್ರೋಹಿ ಪದ ಬಳಕೆ ಸರಿಯಲ್ಲ. ರಾಷ್ಟ್ರದ್ರೋಹಿಯ ಕಾರ್ಯ ನನಗೇನು ಕಂಡು ಬಂದಿಲ್ಲ. ಈಶ್ವರಪ್ಪ ಹಾರಾಟ-ಕೂಗಾಟ ಹೊಸದೇನಲ್ಲ, ಅವರ ಮಾತಿಗೆ ಬ್ರೇಕಿಲ್ಲ. ಆದರೆ, ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯುವುದು ಸರಿಕಾಣಲಿಲ್ಲ ಎಂದು ಈಶ್ವರಪ್ಪ ಪರ ವಾಟಾಳ್ ಬ್ಯಾಟ್ ಬೀಸಿದ್ದಾರೆ.

ಇನ್ನು, ಸದನದಲ್ಲಿ ಚರ್ಚೆ ಮಾಡದೇ ಕಾಂಗ್ರೆಸ್ ಪ್ರತಿಭಟಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಸದನವೇ ಸರಿಯಾಗಿ ಈಗ ನಡೆಯುತ್ತಿಲ್ಲ, ಅಂತಹದರಲ್ಲಿ ಗಂಭೀರ ಚರ್ಚೆ ಮಾಡುವುದನ್ನು ಬಿಟ್ಟು ಧರಣಿ ನಡೆಸುವುದು ಸರಿಯಲ್ಲ. ಸಿದ್ದರಾಮಯ್ಯ ಪ್ರಬುದ್ಧ ರಾಜಕಾರಣಿಯಾಗಿದ್ದು ಅವರು ಧರಣಿಯನ್ನು ಕೈಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ : 58 ವರ್ಷದ ಸಮಸ್ಯೆ 1 ಗಂಟೆಯಲ್ಲಿ ಪರಿಹಾರವಾಯ್ತಂತೆ.. ಇದು ಬಸಪ್ಪನ ಪವಾಡವಂತೆ..

ಹಿಜಾಬ್ ವಿವಾದದ ಬಗ್ಗೆ ಮಾತನಾಡಿ, ಸಮವಸ್ತ್ರ ನೀತಿಯನ್ನೇನೋ ಸರ್ಕಾರ ಜಾರಿ ಮಾಡಿತು. ಆದರೆ, ಯಾವುದು ಸಮವಸ್ತ್ರ, ಯಾವ ಬಣ್ಣ, ಹೇಗಿರಬೇಕು ಎಂಬುದನ್ನೇ ಹೇಳಿಲ್ಲ. ಕಚ್ಚೆ ಹಾಕ್ಕೊಂಡು ಬರಬೇಕೆ, ಪೇಟಾ ಧರಿಸಬೇಕೆ, ಸೂಟ್ ಹಾಕಬೇಕೆ ಏನೂ ಹೇಳಿಲ್ಲ. ವಿದ್ಯಾರ್ಥಿಗಳ ಕೊರಳಿಗೆ ಕೇಸರಿ ಶಾಲು ಈಗ ಬಂದಿದ್ದು ಹಿಜಾಬ್ ಹಿಂದಿನಿಂದಲೂ ಇತ್ತು, ಹೈಕೋರ್ಟ್ ಯಾವ ಆದೇಶ ನೀಡುವುದೋ ನೋಡೋಣ ಎಂದರು.

For All Latest Updates

TAGGED:

ABOUT THE AUTHOR

...view details