ಕರ್ನಾಟಕ

karnataka

ETV Bharat / state

ಚಾಮರಾಜನಗರ : 50 ಅಡಿ ಕಂದಕದಿಂದ ಸಿಪಿ ಯೋಗೇಶ್ವರ್​ ಬಾವನ ಮೃತದೇಹ ಹೊರಕ್ಕೆ - ಎಂಎಲ್​ಸಿ ಸಿಪಿ ಯೋಗೇಶ್ವರ್​

ನಾಪತ್ತೆಯಾಗಿದ್ದ ಎಂಎಲ್​ಸಿ ಸಿಪಿ ಯೋಗೇಶ್ವರ್​ ಅವರ ಬಾವನ ಮೃತದೇಹವನ್ನು 50 ಅಡಿ ಕಂದಕದಿಂದ ಮೇಲಕ್ಕೆತ್ತಲಾಯಿತು.

mlc-cp-yogeshwar-brother-in-law-found-dead
ಚಾಮರಾಜನಗರ : 50 ಅಡಿ ಕಂದಕದಿಂದ ಸಿಪಿ ಯೋಗೇಶ್ವರ್​ ಬಾವನ ಶವ ಹೊರಕ್ಕೆ

By ETV Bharat Karnataka Team

Published : Dec 4, 2023, 11:01 PM IST

ಚಾಮರಾಜನಗರ : 50 ಅಡಿ ಕಂದಕದಿಂದ ಸಿಪಿ ಯೋಗೇಶ್ವರ್​ ಬಾವನ ಮೃತದೇಹ ಹೊರಕ್ಕೆ

ಚಾಮರಾಜನಗರ : ಎಂಎಲ್ಸಿ ಸಿ ಪಿ ಯೋಗೇಶ್ವರ್​ ಅವರ ಬಾವ ಮಹಾದೇವಯ್ಯ ಶವವಾಗಿ ಪತ್ತೆಯಾಗಿದ್ದು, ಅವರ ಮೃತದೇಹವನ್ನು ಸತತ ಕಾರ್ಯಾಚರಣೆ ನಡೆಸಿ 50 ಅಡಿ ಕಂದಕದಿಂದ ಮೇಲಕ್ಕೆ ಎತ್ತಲಾಗಿದೆ. ಹಂತಕರು ಹನೂರು ತಾಲೂಕಿನ ರಾಮಾಪುರದಿಂದ 6 ಕಿ.ಮೀ ದೂರದ 50 ಅಡಿಗೂ ಆಳದ ಕಂದಕದಲ್ಲಿ ಶವವನ್ನು ಟಾರ್ಪಲ್, ಬೆಡ್ ಶೀಟ್ ಹಾಕಿ ಮುಚ್ಚಿಟ್ಟಿದ್ದರು. ಬಳಿಕ ಬೆರಳಚ್ಚು ತಜ್ಞರು ಹಾಗೂ ಇನ್ನಿತರ ತಜ್ಞರು ಬಂದು ಸ್ಥಳ ಮಹಜರು ನಡೆಸಿ ಸಾಕ್ಷ್ಯಾಧಾರ ಕಲೆ ಹಾಕಿದ ಬಳಿಕ ಪೊಲೀಸರು ಹರಸಾಹಸ ಪಟ್ಟು ಶವವನ್ನು ಮೇಲಕ್ಕೆ ಎತ್ತಿದರು.

ಬಳಿಕ ಬಿಡದಿ ಸಮೀಪದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಶವ ರವಾನೆ ಮಾಡಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ಹಾಗೂ ಪ್ರಕರಣ ದಾಖಲಾಗಿರುವುದರಿಂದ ಮುಂದಿನ ತನಿಖೆಯನ್ನು ರಾಮನಗರ ಪೊಲೀಸರೇ ಕೈಗೊಳ್ಳಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹು ಮಾತನಾಡಿ, ನಾಪತ್ತೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಮಪುರದಲ್ಲಿ ಅವರ ಕಾರು ಪತ್ತೆಯಾದ ಬಳಿಕ ಶವವೂ ಪತ್ತೆಯಾಗಿದೆ. ರಾಮನಗರ ಪೊಲೀಸರು ಕೂಡ ಬಂದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ತನಿಖೆ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಎಂಎಲ್​ಸಿ ಸಿ ಪಿ ಯೋಗೇಶ್ವರ್​ ಬಾವ ಶವವಾಗಿ ಪತ್ತೆ: ಕೊಲೆ ಶಂಕೆ

ABOUT THE AUTHOR

...view details