ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಸಿಎಂ ಸ್ಥಾನದ ಬಯಕೆಯನ್ನು ಪರೋಕ್ಷವಾಗಿ ಹೊರಹಾಕಿದ ಯತ್ನಾಳ್ - ಪಂಚಮಸಾಲಿ ಲಿಂಗಾಯತಕ್ಕೆ 2ಎ ಮೀಸಲಾತಿಯ ಹೋರಾಟದ ಸಭೆಯಲ್ಲಿ ಶಾಸಕ ಯತ್ನಾಳ್

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬುದು ಸರಿಯಲ್ಲ. ಸಿದ್ದರಾಮಯ್ಯ ಹಲವಾರು ಬಾರಿ ಬಂದು 5 ವರ್ಷ ಆಡಳಿತ ನಡೆಸಲಿಲ್ಲವೇ? ಚಾಮರಾಜನಗರಕ್ಕೆ ಸಿಎಂ ಬರುತ್ತಿಲ್ಲ. ನೋಡೋಣ ಕಾಲ ಕೂಡಿ ಬಂದರೆ ಮುಂದೆ ನಾನೂ ಬರುತ್ತೇನೆ ಎಂದು ಸಿಎಂ ಆಗುವ ಮನದಿಂಗಿತ ಹೊರಹಾಕಿದರು.

ಪಂಚಮಸಾಲಿ ಲಿಂಗಾಯತಕ್ಕೆ 2ಎ ಮೀಸಲಾತಿಯ ಹೋರಾಟದ ಸಭೆ
ಪಂಚಮಸಾಲಿ ಲಿಂಗಾಯತಕ್ಕೆ 2ಎ ಮೀಸಲಾತಿಯ ಹೋರಾಟದ ಸಭೆ

By

Published : Jul 6, 2021, 3:10 PM IST

Updated : Jul 6, 2021, 3:23 PM IST

ಚಾಮರಾಜನಗರ: ಭವಿಷ್ಯದಲ್ಲಿ ತಾವೂ ಕೂಡ ಸಿಎಂ ಆಕಾಂಕ್ಷಿ ಎಂಬ ಮನದಿಂಗಿತವನ್ನು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸೂಚ್ಯವಾಗಿ ಹೊರಹಾಕಿದ ಘಟನೆ ಇಂದು ನಗರದ ವರ್ತಕರ ಭವನದಲ್ಲಿ ನಡೆಯಿತು.

ಯತ್ನಾಳ್

ಪಂಚಮಸಾಲಿ ಲಿಂಗಾಯತಕ್ಕೆ 2ಎ ಮೀಸಲಾತಿಯ ಹೋರಾಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಾಮರಾಜನಗರಕ್ಕೆ ಸಿಎಂ ಬರುತ್ತಿಲ್ಲ. ಯಾಕಂದ್ರೆ ಅಧಿಕಾರ ಹೋಗಲಿದೆ ಎಂಬ ಭಯ. ಸಿದ್ದರಾಮಯ್ಯ ಹಲವಾರು ಬಾರಿ ಬಂದು 5 ವರ್ಷ ಆಡಳಿತ ನಡೆಸಲಿಲ್ಲವೇ? ನೋಡೋಣ ಕಾಲ ಕೂಡಿ ಬಂದರೆ ಮುಂದೆ ನಾನೂ ಬರುತ್ತೇನೆ ಎಂದು ಸಿಎಂ ಆಗುವ ಮನದಿಂಗಿತ ಹೊರಹಾಕಿದರು.

ರೈಲ್ವೆ ಸಚಿವನಾಗಿ ಚಾಮರಾಜನಗರಕ್ಕೆ ಬಂದಿದ್ದೆ, ಅದಾದ ಬಳಿಕವು ಎಂಪಿ ಆಗಿದ್ದೇನೆ, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬುದು ಸರಿಯಲ್ಲ. ಮಂಗಳವಾರ ಪುರಾಣ ಪ್ರಸಿದ್ಧವಾದ ಹರಳುಕೋಟೆ ಹನುಮನ ಆಶೀರ್ವಾದ ಪಡೆದಿದ್ದು, ಇಲ್ಲಿಂದಲೇ ನನ್ನ ರಾಜಕೀಯ ಉತ್ತುಂಗಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಯಾವುದಕ್ಕೂ ಹೆದರುವ ಮಗನಲ್ಲ, ಇತ್ತೀಚಿಗೆ ವಾಲ್ಮೀಕಿ ಸಮಾಜದವರನ್ನು ತುಳಿಯುವ ಪ್ರಯತ್ನ ಮಾಡಿದಂತೆ ನನ್ನ ವಿರುದ್ಧವೂ ಷಡ್ಯಂತ್ರ ನಡೆಯುತ್ತಿದೆ ಎಂದು ಪರೋಕ್ಷವಾಗಿ ಸಿಎಂ ಹಾಗೂ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

Last Updated : Jul 6, 2021, 3:23 PM IST

ABOUT THE AUTHOR

...view details