ಚಾಮರಾಜನಗರ :ಮೈಸೂರು ಮೇಯರ್ ಚುನಾವಣೆಯಲ್ಲಿ ಒಬ್ಬ ನಾಯಕರಿಗೆ ಹಿನ್ನೆಡೆ ಉಂಟು ಮಾಡಬೇಕೆಂದು ಸ್ವಪಕ್ಷದವರೇ ಮೇಯರ್ ಸ್ಥಾನವನ್ನು ಬೇರೆ ಪಕ್ಷಕ್ಕೆ ಬಿಟ್ಟುಕೊಟ್ಟರು ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು.
ಓದಿ: ಪರಿಷತ್ ಸಚಿವಾಲಯದ ಸಿಬ್ಬಂದಿಗೆ ಡ್ರೆಸ್ ಕೋಡ್ ಕಡ್ಡಾಯ : ಮಾರ್ಚ್ 15ರಿಂದ ಜಾರಿ
ನಗರದಲ್ಲಿ ಆರ್.ಧೃವನಾರಾಯಣ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೀತಿಯ ಭಿನ್ನಮತ ಚಟುವಟಿಕೆ ಮತ್ತೆ ಯಾವ ಜಿಲ್ಲೆಯಲ್ಲೂ ಮರುಕಳಿಸಬಾರದು. ಈ ರೀತಿಯ ಘಟನೆಗಳಾದರೇ, ಪಕ್ಷದ ಒಗ್ಗಟ್ಟು ಒಡೆಯಲಿದೆ. ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಜನರಲ್ಲಿ ಬರಬಾರದು ಎಂದು ಅವರು ಅಭಿಪ್ರಾಯಪಟ್ಟರು.