ಕರ್ನಾಟಕ

karnataka

ETV Bharat / state

ಆರೋಪಿಗಳ ಪತ್ತೆಯಾಗದಿರುವುದು ಪೊಲೀಸರಿಗೆ ಹಿನ್ನಡೆ: ಯತೀಂದ್ರ ಸಿದ್ದರಾಮಯ್ಯ - ಸಾಮೂಹಿಕ ಅತ್ಯಾಚಾರ

ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, ಸರ್ಕಾರವ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

MLA Yetindra Siddaramaiah
ಶಾಸಕ ಯತೀಂದ್ರ ಸಿದ್ದರಾಮಯ್ಯ

By

Published : Aug 27, 2021, 12:59 PM IST

ಚಾಮರಾಜನಗರ: ಸಾಮೂಹಿಕ ಅತ್ಯಾಚಾರ ನಡೆದು 48 ಗಂಟೆಗಳಾದರೂ ಆರೋಪಿಗಳ ಪತ್ತೆಯಾಗದಿರುವುದು ಪೊಲೀಸರಿಗೆ ಹಿನ್ನಡೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಸುತ್ತೂರಿನಲ್ಲಿ ಕೆರೆ ತುಂಬುವ ಯೋಜನೆ ಪರಿಶೀಲನೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರು ಚುರುಕಿನಿಂದ ಕರ್ತವ್ಯ ನಿರ್ವಹಿಸಿ ಆದಷ್ಟು ಬೇಗ ಆರೋಪಿಗಳನ್ನು ಸೆರೆಹಿಡಿದು ಜನರಿಗೆ ಸುರಕ್ಷಿತ ಭಾವನೆ ಬರುವಂತೆ ಮಾಡಬೇಕು. ಮೈಸೂರಿನಲ್ಲಿ ಈ ರೀತಿ ಘಟನೆ ನಡೆದಿರುವುದು ಕಳವಳಕಾರಿ ವಿಚಾರ. ಇನ್ನು ಬೇರೆ ನಗರಗಳ ಗತಿ ಏನು? ಎಂದು ಬೇಸರ ಹೊರಹಾಕಿದರು‌.

ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತು
ಹೆಣ್ಣು ಮಕ್ಕಳು ಯಾವ ಸಮಯಕ್ಕೆ ಎಲ್ಲಿಗೆ ಹೋಗಬೇಕು ಎಂದು ಹೇಳಲು ನಾವುಗಳು ಯಾರೂ ಅಲ್ಲ. ಹೆಣ್ಣು ಮಕ್ಕಳಾಗಲಿ, ಯಾರೇ ಆಗಲಿ ಎಲ್ಲೇ ಹೋದರು ಅವರಿಗೆ ರಕ್ಷಣೆ ನೀಡುವುದು ಸರ್ಕಾರದ ಕೆಲಸ ಎಂದರು.

ಸರ್ಕಾರ ರಾಜಕೀಯ ಮಾಡುವುದನ್ಮು ಬಿಟ್ಟು ಇನ್ನಾದರೂ ಆಡಳಿತದ ಕಡೆ ಗಮನ ನೀಡಲಿ. ಅಧಿಕಾರಕ್ಕೋಸ್ಕರ ಹೊಡೆದಾಡುವುದನ್ನು ಬಿಟ್ಟು ಸಮರ್ಪಕ ಆಡಳಿತದ ನಿರ್ವಹಿಸಬೇಕು. ಗೃಹ ಸಚಿವರು ಕೂಡ ಜವಾಬ್ದಾರಿ ಸ್ಥಾನದಲ್ಲಿದ್ದು ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಹೇಳಿದರು.

ಇದನ್ನೂ ಓದಿ:ಮೈಸೂರು ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತನ ಹೇಳಿಕೆ ಪಡೆದ ಪೊಲೀಸರು: ಆತ ಹೇಳಿದ್ದಿಷ್ಟು..

ABOUT THE AUTHOR

...view details