ಕೊಳ್ಳೇಗಾಲ(ಚಾಮರಾಜನಗರ):ತಾಲೂಕಿನ ಪಾಳ್ಯ ಗ್ರಾಮದಲ್ಲಿ ಈಚೆಗೆ ಕೆರೆ ಒಡೆದು ಅನಾಹುತ ಉಂಟಾಗಿತ್ತು. ಇದನ್ನು ವೀಕ್ಷಿಸಲು ಸ್ಥಳಕ್ಕೆ ಭೇಟಿ ನೀಡಿದ ಹನೂರು ಶಾಸಕ ನರೇಂದ್ರ ಅವರಿಗೆ ರೈತರು ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಎಂಎಲ್ಎ ಪವರ್ ಅಂದ್ರೆ ಏನು ಗೊತ್ತಾ ನಿಮಗೆ; ಶಾಸಕ ಆರ್.ನರೇಂದ್ರಗೆ ಜೆಡಿಎಸ್ ಕಾರ್ಯಕರ್ತರು ಪ್ರಶ್ನೆ - mla R.narendra
ಕೆರೆ ಒಡೆದು ಜಮೀನಿಗೆ ನೀರು ನುಗ್ಗಿದ್ದರಿಂದ ಸ್ಥಳಕ್ಕೆ ಹನೂರು ಶಾಸಕ ಆರ್.ನರೇಂದ್ರ ಭೇಟಿ ನೀಡಿದ್ದರು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕರ್ತರು ಶಾಸಕರಿಗೆ ಮುತ್ತಿಗೆ ಹಾಕಿದ್ದಾರೆ.
![ಎಂಎಲ್ಎ ಪವರ್ ಅಂದ್ರೆ ಏನು ಗೊತ್ತಾ ನಿಮಗೆ; ಶಾಸಕ ಆರ್.ನರೇಂದ್ರಗೆ ಜೆಡಿಎಸ್ ಕಾರ್ಯಕರ್ತರು ಪ್ರಶ್ನೆ mla R.Narendra visit to palya village today](https://etvbharatimages.akamaized.net/etvbharat/prod-images/768-512-8861368-1023-8861368-1600517181976.jpg)
ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಹಾಗೂ ಕಾರ್ಯಕರ್ತರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 13 ವರ್ಷಗಳಿಂದ ಶಾಸಕರಾಗಿ ಹನೂರು ಭಾಗದ ರಸ್ತೆ ಕಾಮಗಾರಿ ಅಭಿವೃದ್ಧಿ ಪಡಿಸಲು ವಿಫಲರಾಗಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಭಾಗದಲ್ಲಿ ನಿಮ್ಮ ಸಾಧನೆ ಅಥವಾ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಮಾಡಬಹುದಿತ್ತು. ಆದರೆ, ಆ ಕೆಲಸ ಮಾಡಲಿಲ್ಲ, ಸುಮ್ಮನೆ ಶಾಸಕರಾಗಿದ್ದೀರಿ. ಎಂಎಲ್ಎ ಪವರ್ ಅಂದ್ರೆ ಏನು ಗೊತ್ತಾ ನಿಮಗೇ? ನೀವು ರಾಜೀನಾಮೆ ಕೊಡಿ ಎಂದು ಜೆಡಿಎಸ್ ಮುಖಂಡ ಮಂಜೇಶ್ ಗೌಡ ವ್ಯಂಗ್ಯವಾಡಿದರು. ಇದಕ್ಕೆ ಶಾಸಕ ಕೋಪದಲ್ಲಿ ಪ್ರತಿಕ್ರಿಯಿಸಿ ಅಲ್ಲಿಂದ ತೆರಳಿದ್ದಾರೆ.