ಕರ್ನಾಟಕ

karnataka

ETV Bharat / state

ವಾರದಲ್ಲಿ ಒಂದಿನವಾದ್ರೂ ಎಣ್ಣೆ ಅಂಗಡಿ ಓಪನ್ ಮಾಡಿ:  ಶಾಸಕ ಪುಟ್ಟರಂಗಶೆಟ್ಟಿ ಮನವಿ

ಕಾಳಸಂತೆಯಲ್ಲಿ 10 ಪಟ್ಟು ಹೆಚ್ಚು ಹಣ ತೆತ್ತು ಜನರು ಕುಡಿಯುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಮಹಿಳೆಯರು ಮದ್ಯದಂಗಡಿ ಬೇಡ ಎನ್ನುತ್ತಾರೆ. ಆದರೆ, ಕಳ್ಳಭಟ್ಟಿ ತಯಾರಿಸುತ್ತಿರುವುದು ಮಹಿಳೆಯರೇ ಆಗಿದ್ದಾರೆ, ಸಾಮಾಜಿಕ ಅಂತರ ಕಾಯ್ದುಕೊಂಡು ವಾರಕ್ಕೆ ಒಮ್ಮೆಯಾದರೂ ಮದ್ಯದಂಗಡಿ ತೆರೆದರೆ ಉತ್ತಮ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

mla-puttarangashetty-statement-on-liquor-selling
ಶಾಸಕ ಪುಟ್ಟರಂಗಶೆಟ್ಟಿ

By

Published : Apr 30, 2020, 5:11 PM IST

ಚಾಮರಾಜನಗರ: ಮದ್ಯದಂಗಡಿ ಮುಚ್ಚಿಸಿರುವುದರಿಂದ ಕಳ್ಳಭಟ್ಟಿ ದಂಧೆ, ಕಾಳಸಂತೆ ಮಾರಾಟ ಜಾಲ ಹೆಚ್ಚಾಗಿದ್ದು, ಸರ್ಕಾರ ಮದ್ಯದಂಗಡಿ ತೆರೆಸಬೇಕೆಂದು ಶಾಸಕ ಪುಟ್ಟರಂಗಶೆಟ್ಟಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಳಸಂತೆಯಲ್ಲಿ 10 ಪಟ್ಟು ಹೆಚ್ಚು ಹಣ ತೆತ್ತು ಜನರು ಕುಡಿಯುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಅಬಕಾರಿ ಡಿಸಿ ಎಲ್ಲಿದ್ದಾರೆ, ಅಂಗಡಿಯನ್ನು ಸೀಜ್ ಮಾಡಿದ ಮೇಲೆ ಮದ್ಯ ಹೇಗೆ ಹೊರಗಡೆ ಮಾರಾಟವಾಗುತ್ತಿದೆ ಎಂದು ಅಬಕಾರಿ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

ಮದ್ಯ ಮಾರಾಟ ಕುರಿತು ಶಾಸಕ ಪುಟ್ಟರಂಗಶೆಟ್ಟಿ ಹೇಳಿಕೆ

ಮಹಿಳೆಯರು ಮದ್ಯದಂಗಡಿ ಬೇಡ ಎನ್ನುತ್ತಾರೆ. ಆದರೆ, ಕಳ್ಳಭಟ್ಟಿ ತಯಾರಿಸುತ್ತಿರುವುದು ಮಹಿಳೆಯರೇ ಆಗಿದ್ದಾರೆ, ಸಾಮಾಜಿಕ ಅಂತರ ಕಾಯ್ದುಕೊಂಡು ವಾರಕ್ಕೆ ಒಮ್ಮೆಯಾದರೂ ಮದ್ಯದಂಗಡಿ ತೆರೆದರೆ ಕಳ್ಳಭಟ್ಟಿ ಹಾಗೂ ಕಾಳಸಂತೆ ಮಾರಾಟ ನಿಲ್ಲಿಸಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ABOUT THE AUTHOR

...view details