ಚಾಮರಾಜನಗರ:ಕೆಪಿಸಿಸಿ ವತಿಯಿಂದ 36 ಜನರಿಗೆ ಒಂದೊಂದು ಲಕ್ಷವನ್ನಾದರೂ ಕೊಟ್ಟಿದ್ದೀವಿ, ಅವರೇನು ಕೊಟ್ಟಿದ್ದಾರೆ?, ಇಡೀ ರಾಜ್ಯಕ್ಕೆ ಡಿ.ಕೆ ಶಿವಕುಮಾರ್ ದುಡ್ಡು ಕೊಡಲಿ ಎಂದು ಹೇಳಿಕೆ ನೀಡಿದ್ದ ನಾರಾಯಣಗೌಡ ವಿರುದ್ಧ ಶಾಸಕ ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿಮಂದಿರದಲ್ಲಿ ಜಾನಪದ ಕಲಾವಿದರಿಗೆ ಆಹಾರ ಕಿಟ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ರು. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಅವರಿಗೆ ಯೋಗ್ಯತೆ ಇಲ್ಲ, ನಮ್ಮ ಬಗ್ಗೆ ಅವರೇನು ಮಾತನಾಡುವುದು? ಎಂದು ಹರಿಹಾಯ್ದರು. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೆ ಎಲ್ಲರಿಗೂ ದುಡ್ಡು ಕೊಡುತ್ತಿದ್ದೆವು. ಕೆಪಿಸಿಸಿ ವತಿಯಿಂದ ಅಷ್ಟಾದರೂ ಕೊಟ್ಟಿದ್ದೇವೆ, ನಾರಾಯಣಗೌಡ ಏನು ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.