ಕರ್ನಾಟಕ

karnataka

ETV Bharat / state

ಆನೆ ದಾಳಿಯಿಂದ ಬಾಲಕನ ಸಾವು: ಶೀಘ್ರ ಪರಿಹಾರಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಸೂಚನೆ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಆನೆ ದಾಳಿಯಿಂದ ಮೃತಪಟ್ಟ ಬಾಲಕನ ಸ್ವಗ್ರಾಮಕ್ಕೆ ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಭೇಟಿ ನೀಡಿ ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ
ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ

By

Published : Jul 25, 2023, 6:31 PM IST

Updated : Jul 26, 2023, 3:04 PM IST

ಶಾಸಕ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಚಾಮರಾಜನಗರ : ಇತ್ತೀಚೆಗೆ ಜಿಲ್ಲೆಯ ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ಆನೆ ದಾಳಿಯಿಂದ ಗಾಯಗೊಂಡಿದ್ದ ಅಭಿಷೇಕ್ (16) ಮೃತಪಟ್ಟಿದ್ದಾನೆ. ಹೀಗಾಗಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಲು ಶಾಸಕ ಸಿ. ಪುಟ್ಟರಂಗಶೆಟ್ಟಿ ಬಂದಿದ್ದರು. ಆನೆ ದಾಳಿ ನಡೆದು ತಿಂಗಳು ಕಳೆದರೂ ಈವರೆಗೆ ಮೊದಲ ಕಂತಿನ ಪರಿಹಾರದ ಹಣ ಸಿಕ್ಕಿಲ್ಲ. ಈ ಪರಿಹಾರದ ಹಣವನ್ನು ಶೀಘ್ರದಲ್ಲೇ ನೀಡುವಂತೆ ಅರಣ್ಯಾಧಿಕಾರಿಗಳಿಗೆ ಶಾಸಕರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ಬಾಲಕನ ಮೇಲೆ ಆನೆ ದಾಳಿ ನಡೆಸಿ ತಿಂಗಳಾದರೂ ಮೊದಲ ಕಂತಿನ ಹಣವನ್ನು ಏಕೆ ಕೊಟ್ಟಿಲ್ಲ ಎಂದು ಸಚಿವರು ಪ್ರಶ್ನಿಸಿದರು. ಪರಿಹಾರ ನೀಡಲು ದಾಖಲೆಗಳನ್ನು ಕೊಟ್ಟಿಲ್ಲ ಎಂದು ಅರಣ್ಯಾಧಿಕಾರಿಗಳು ಹೇಳಿದರು. ಇದೇ ವೇಳೆ ಸಿಟ್ಟಿಗೆದ್ದ ಶಾಸಕರು ನಿಮ್ಮ ಡಿಸಿಎಫ್ ಅವರಿಗೆ ಈ ಘಟನೆ ಬಗ್ಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಡಾಕ್ಯುಮೆಂಟ್ ಕೊಡಲು ಅವರಿಗೇನು ಗೊತ್ತು. ನೀವೇ ಕಲೆಕ್ಟ್ ಮಾಡಬೇಕು. ಕೂಡಲೇ ಮೊದಲ ಕಂತಿನ ಹಣ ಹಾಗೂ ಉಳಿದ ಹಣವನ್ನು ಫಲಾನುಭವಿಗೆ ಕೊಡಿ. ಕಾಡು ಪ್ರಾಣಿಗಳ ದಾಳಿಗೆ ಸೋಲಿಗರು ಕಾಡಿನ ಹೊರಗೆ ಇಲ್ಲವೇ ಒಳಗೆ ಮೃತಪಟ್ಟರೂ ಪರಿಹಾರ ಕೊಡಬಹುದು. ಬೇಜವಾಬ್ದಾರಿ ಬೇಡ. ಕೂಡಲೇ ಕ್ರಮ ವಹಿಸಿ ಎಂದು ಎಂದು ಅರಣ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪುಟ್ಟರಂಗಶೆಟ್ಟಿ ಅವರು, ಎಪ್ರಿಲ್​ 18 ರಂದು ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬದುಕು ಸಾಧ್ಯತೆಗಳು ಕಡಿಮೆ ಇದ್ದ ಕಾರಣ ಬಾಲಕನನ್ನು ವೈದ್ಯರು ಮನೆಗೆ ಕಳುಹಿಸಿದ್ದರು. ಇದೀಗ ಬಾಲಕ ಮೃತಪಟ್ಟಿದ್ದಾನೆ. ಕಾನೂನು ಪ್ರಕಾರ ಮೃತಪಟ್ಟ ವೇಳೆ 5 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಬೇಕು. ಉಳಿದ 10 ಲಕ್ಷ ರೂ. ಗಳನ್ನು ಶವಪರೀಕ್ಷೆ ರಿಪೋರ್ಟ್​ ಬಂದ ಮೇಲೆ ನೀಡಬೇಕಿದೆ. ಹಾಗಾಗಿ ಅದಷ್ಟು ಬೇಗ ಈ ಪರಿಹಾರವನ್ನು ನೀಡಬೇಕು ಎಂದು ಸೂಚನೆ ಕೊಟ್ಟರು.

ಇದೇ ವೇಳೆ ಡಿಸಿಎಂ ಡಿ.ಕೆ ಶಿವಕಮಾರ್​ ಹೇಳಿರುವ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆದರೆ, ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ರಾತ್ರಿ ಕಂಡ ಬಾವಿಗೆ ಯಾರೂ ಹಗಲಲ್ಲಿ ಬೀಳಲ್ಲ. ಬಿಜೆಪಿ ಕುತಂತ್ರ ಈಗಾಗಲೇ ಜಗಜ್ಜಾಹೀರಾಗಿದೆ. ಹೆಚ್ಚು ಕಡಿಮೆ ಆದರೆ ಬಿಜೆಪಿನೂ ಬಿದ್ದೋಗುತ್ತೆ, ದಳನೂ ಇರಲ್ಲಾ ಎಂದರು. ಬಳಿಕ ಮೈಸೂರು ಹಾಗೂ ಚಾಮರಾಜನಗರವನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕೆಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಮಾಡಿದ್ದೇನೆ. 20% ಮಳೆ ಕಡಿಮೆಯಾಗಿದ್ದು, ಈಗ ಬೀಳುತ್ತಿರುವ ಮಳೆಯಿಂದಲೂ ಬೆಳೆ ಕೈ ಸೇರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ :ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಮುಗಿದಿಲ್ಲ, ಅಷ್ಟರಲ್ಲೇ ಸ್ವಪಕ್ಷದವರಿಂದ ಅಪಸ್ವರ: ಜಿ ಟಿ ದೇವೇಗೌಡ ಟೀಕೆ

Last Updated : Jul 26, 2023, 3:04 PM IST

ABOUT THE AUTHOR

...view details