ಚಾಮರಾಜನಗರ: ಆರ್ಎಸ್ಎಸ್ ಹಾಗೂ ತಾಲಿಬಾನ್ ಸಿದ್ಧಾಂತ ಎರಡೂ ಒಂದೇ, ಸಿದ್ದರಾಮಯ್ಯ ಹೇಳಿರುವುದು ಸರಿಯಾಗಿದೆ ಎಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಪರ ದನಿಗೂಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ತಾಲಿಬಾನಿಗಳು ಅಲ್ಲಿ ಗನ್ ಹಿಡಿದು ಪರೇಡ್ ನಡೆಸುತ್ತಾರೆ, ಆರ್ಎಸ್ಎಸ್ನವರು ಕೋಲು ಹಿಡಿದುಕೊಂಡು ಇಲ್ಲಿ ಪಥ ಸಂಚಲನ ನಡೆಸುತ್ತಾರೆ, ತಾಲಿಬಾನಿಗೂ ಸಂಘ ಪರಿವಾರಕ್ಕೂ ಅಂಥಾ ವ್ಯತ್ಯಾಸವೇನು ಇಲ್ಲ ಎಂದರು.
RSS, ತಾಲಿಬಾನ್ ಎರಡೂ ಒಂದೇ..ಇವರು ಕೋಲು ಹಿಡಿತಾರೆ ಅವರು ಗನ್ ಹಿಡಿತಾರೆ: ಶಾಸಕ ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಹೇಗೇಗೋ ಆಡ್ತಾರೆ ಎಂದಿದ್ದ ಸಚಿವ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಅವರು ಹೋಗಿರುವುದರಿಂದ ಅಲ್ಲಿನ ಸಿದ್ಧಾಂತಕ್ಕೆ ಒಗ್ಗಿಕೊಂಡಿದ್ದಾರೆ, ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಯೋಗ್ಯತೆ ಸೋಮಶೇಖರ್ಗೆ ಇಲ್ಲ, ಸಿದ್ದರಾಮಯ್ಯ ಅವರ ಮಾತಿಗೆ ಅದರದೇ ಆದ ಘನತೆ ಇದೆ ಎಂದು ಸಚಿವರ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:Video: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಪೊಲೀಸ್ ಮತ್ತು ಯುವಕ!