ಕರ್ನಾಟಕ

karnataka

ETV Bharat / state

ಕೆಲವರ ಹೇಳಿಕೆಗಳಿಗೆ ಬೇಸತ್ತು ಸಿಎಂ ರಾಜೀನಾಮೆ ಮಾತನಾಡಿದ್ದಾರೆ : ಶಾಸಕ ನಿರಂಜನ ಕುಮಾರ್ - ಸಿಎಂ ಯಡಿಯೂರಪ್ಪ ರಾಜೀನಾಮೆ ವಿಚಾರ

ನೆರೆಯ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮನೆಯಿಂದ ಹೊರಬಾರದೆ, ಮನೆಯಲ್ಲೇ ಇರುವವರ ನಡುವೆ ಇಂತಹ ವಯಸ್ಸಿನಲ್ಲಿಯೂ ಕೆಲಸ ನಿರ್ವಹಿಸುತ್ತಿರುವ ಯಡಿಯೂರಪ್ಪನವರನ್ನು ಎಲ್ಲರೂ ಮೆಚ್ಚಲೇಬೇಕು..

nirananjan
nirananjan

By

Published : Jun 6, 2021, 6:53 PM IST

ಚಾಮರಾಜನಗರ : ಪಕ್ಷದಲ್ಲಿನ ಕೆಲ ಸ್ವಯಂಘೋಷಿತ ನಾಯಕರುಗಳ ಹೇಳಿಕೆಗಳಿಗೆ ನೊಂದು ಸಿಎಂ ಯಡಿಯೂರಪ್ಪ ರಾಜೀನಾಮೆ ಮಾತನಾಡಿದ್ದಾರೆ ಎಂದು ಗುಂಡ್ಲುಪೇಟೆ ಶಾಸಕ ನಿರಂಜನ ಕುಮಾರ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜೀನಾಮೆ ನೀಡಬೇಕೆಂದು ಯಾರೂ ಯಡಿಯೂರಪ್ಪಗೆ ಒತ್ತಡ ಹೇರಿಲ್ಲ. 2023ರವರೆಗೆ ಬಿಎಸ್​ವೈ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

78ರ ಇಳಿವಯಸ್ಸಿನಲ್ಲಿ 28ರ ಯುವಕನಂತೆ ಅತ್ಯಂತ ಉತ್ಸಾಹದಿಂದ ಕೊರೊನಾ ಕಟ್ಟೆಚ್ಚರದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರು, ಆಸ್ಪತ್ರೆ ಸಿಬ್ಬಂದಿ ವರ್ಗ, ವಿವಿಧ ಇಲಾಖೆಯ ಅಧಿಕಾರಿ ವರ್ಗದವರ ಜೊತೆ ನಿರಂತರ ಸಭೆಗಳನ್ನು ನಡೆಸಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದಾರೆ.‌

ನೆರೆಯ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮನೆಯಿಂದ ಹೊರಬಾರದೆ, ಮನೆಯಲ್ಲೇ ಇರುವವರ ನಡುವೆ ಇಂತಹ ವಯಸ್ಸಿನಲ್ಲಿಯೂ ಕೆಲಸ ನಿರ್ವಹಿಸುತ್ತಿರುವ ಯಡಿಯೂರಪ್ಪನವರನ್ನು ಎಲ್ಲರೂ ಮೆಚ್ಚಲೇಬೇಕು.

ಕರ್ನಾಟಕದಲ್ಲಿ ಅನಂತಕುಮಾರ್ ಅವರೊಟ್ಟಿಗೆ ಪಕ್ಷಕ್ಕೆ ಭದ್ರ ಬುನಾದಿಯನ್ನು ಹಾಕಿ, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ತರಲು ಹಗಲು-ರಾತ್ರಿ ಶ್ರಮಿಸಿರುವ ಯಡಿಯೂರಪ್ಪ ಪ್ರಶ್ನಾತೀತ ನಾಯಕರು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details