ಕರ್ನಾಟಕ

karnataka

ETV Bharat / state

ಕೋವಿಡ್ ನಿರ್ವಹಣೆಗೆ‌ ಪ್ರದೇಶಾಭಿವೃದ್ಧಿ ಯೋಜನೆಯಿಂದ ₹50 ಲಕ್ಷ ಬಳಸಿ : ಶಾಸಕ ಎನ್‌.ಮಹೇಶ್ - ಕೊರೊನಾ

ಪ್ರದೇಶಾಭಿವೃದ್ಧಿ ಯೋಜನೆಯಿಂದ ಕೋವಿಡ್ ನಿರ್ವಹಣೆಗೆ‌ ₹50 ಲಕ್ಷ ಬಳಸಿ ಎಂದು ಶಾಸಕ ಎನ್​ ಮಹೇಶ್ ಚಾಮರಾಜನಗರ​ ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ..

mahesh
mahesh

By

Published : May 19, 2021, 8:03 PM IST

ಕೊಳ್ಳೇಗಾಲ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿರುವ 1ನೇ ಕಂತಿ‌ನ 50 ಲಕ್ಷ ರೂ. ಸಂಪೂರ್ಣ ಅನುದಾನವನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋವಿಡ್ ನಿರ್ವಹಣೆಗೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಶಾಸಕ ಎನ್.ಮಹೇಶ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ‌ ಹಾಗೂ ಯಳಂದೂರು ತಾಲೂಕು ‌ಆಸ್ಪತ್ರೆಗಳಲ್ಲಿ ಕೊರೊನಾ ನಿರ್ವಹಣೆಗೆ ಬೇಕಾದ ಅತ್ಯವಶ್ಯಕ ಸವಲತ್ತುಗಳಿಗಾಗಿ ಹಾಗೂ ಕೊರೊನಾ ಬಾಧಿತ ರೋಗಿಗಳ ಅನುಕೂಲಕ್ಕಾಗಿ ಯಳಂದೂರು ಸರ್ಕಾರಿ ಆಸ್ಪತ್ರೆಗೆ 2 ಆ್ಯಂಬುಲೆನ್ಸ್ ವಾಹನವನ್ನು‌ ತುರ್ತಾಗಿ‌ ಖರೀದಿಸಲು ಆದೇಶ‌ ನೀಡಬೇಕೆಂದು ಡಿಸಿಗೆ ಪತ್ರದ ಮುಖೇನ ತಿಳಿಸಿದ್ದಾರೆ.

ABOUT THE AUTHOR

...view details