ಚಾಮರಾಜನಗರ: ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಬೇಕು, ಅವರ ಬದಲಾವಣೆ ಸರಿಯಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಬಿಎಸ್ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅನುಭವಿ ರಾಜಕಾರಣಿಯಾಗಿರುವ ಯಡಿಯೂರಪ್ಪ ಅವರನ್ನು ಬದಲಿಸಿ ಬೇರೆಯವರನ್ನು ತಂದು ಕೂರಿಸಿದರೆ ಆಡಳಿತದ, ಕ್ಷೇತ್ರಗಳ ಪರಿಚಯ ಪಡೆದುಕೊಳ್ಳಲು 6-7 ತಿಂಗಳು ಬೇಕಾಗಲಿದೆ. ಉಳಿದ ಕೇವಲ ಎರಡು ವರ್ಷದಲ್ಲಿ ಈ 6-7 ತಿಂಗಳು ವೇಸ್ಟ್ ಆಗಲಿದೆ. ಅನುಭವಿ ಯಡಿಯೂರಪ್ಪ ಅವರೇ ಮುಂದುವರಿದರೆ ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.